12.6.2015
ಪ್ರಶ್ನೆ: ಸರ್, ನಾನು ಕೋಪವನ್ನು ತೊಡೆದುಹಾಕಲು ಬಯಸುತ್ತೇನೆ. ದಯವಿಟ್ಟು ಅದಕ್ಕೆ ಒಂದು ಮಾರ್ಗವನ್ನು ಸೂಚಿಸಿ.
ಉತ್ತರ: ಕೋಪವು ಯಾವುದೇ ಅರಿವು ಇಲ್ಲದ ಭಾವನಾತ್ಮಕ ಸ್ಥಿತಿ. ಕೋಪದಲ್ಲಿ ಮೂರು ವಿಧಗಳಿವೆ.
1. ನಿಮ್ಮಗಿಂತ ಕೆಳಗಿರುವ ಜನರಿಗೆ ನೀವು ತೋರಿಸುವ ಕೋಪ. ಇಲ್ಲಿ ನೀವು ಮತ್ತು ಇತರರು ಬಾಧಿಸಲ್ಪಡುತ್ತೀರಿ.
2. ನಿಮಗಿಂತ ಶ್ರೇಷ್ಠರು ಅಥವಾ ನಿಮ್ಮ ಕೆಲಸವನ್ನು ಮಾಡಿಕೋಡಬೇಕಾದವರ ಮೇಲೆ ನೀವು ಕೋಪಗೊಳ್ಳದೆ ನಿಗ್ರಹಿಸುತ್ತೀರಿ. ಇಲ್ಲಿ ನೀವು ಮಾತ್ರ ಮೊದಲಿನಿಂದ ಬಳಲುತ್ತಿರುತ್ತೀರ. ಆದರೆ ಒಂದು ದಿನ ನಿಮ್ಮ ನಿಗ್ರಹಿಸಿದ ಕೋಪವು ಸ್ಫೋಟಗೊಳ್ಳುತ್ತದೆ. ಆಗ ನೀವಿಬ್ಬರೂ ಬಾಧಿಸಲ್ಪಡುತ್ತೀರಿ.
3. ಕೋಪಗೊಂಡಂತೆ ನಟಿಸುವ ನಕಲಿ ಕೋಪ. ಇಲ್ಲಿ ಕೋಪವನ್ನು ಇಬ್ಬರ ಅನುಕೂಲಕ್ಕಾಗಿ ಬಳಸಲಾಗುತ್ತದೆ.
ಈ ಮೂರು ರೀತಿಯ ಕೋಪಗಳಲ್ಲಿ, ಮೂರನೆಯದು ಸ್ವೀಕಾರಾರ್ಹ. ನೀವು ಕೋಪದಿಂದ ಮುಕ್ತರಾಗಲು ಬಯಸಿದರೆ, ನಿಮ್ಮ ಅರಿವನ್ನು ಹೆಚ್ಚಿಸಬೇಕು. ನಿಮಗೆ ಕೋಪ ಬಂದರೆ, ನೀವು ತಪ್ಪಿತಸ್ಥರೆಂದು ಭಾವಿಸಬೇಡಿ ಮತ್ತು ಅದನ್ನು ಖಂಡಿಸಬೇಡಿ. ನೀವು ಕೋಪಗೊಂಡಾಗ ಏನಾಗುತ್ತದೆ ಎಂಬುದನ್ನು ಗಮನಿಸಿ. ಆ ಗಮನಿಸುವಿಕೆ ಅರಿವನ್ನು ಹೆಚ್ಚಿಸುತ್ತದೆ.
ಕೋಪವು ಸಾಮಾನ್ಯ ಸ್ಥಿತಿಗೆ ಬರಲು 3 ದಿನಗಳು ಬೇಕಾಗುತ್ತದೆ ಎಂದು ಭಾವಿಸೋಣ. ನಿಮ್ಮ ಅರಿವು ಹೆಚ್ಚಾದಂತೆ ಈ ಅವಧಿ ಕಡಿಮೆಯಾಗುತ್ತದೆ. ನೀವು 2 ದಿನಗಳಲ್ಲಿ, ಒಂದು ದಿನದೊಳಗೆ, ಅರ್ಧ ದಿನದೊಳಗೆ, ಒಂದು ಗಂಟೆಯೊಳಗೆ, 10 ನಿಮಿಷಗಳಲ್ಲಿ, ಕೆಲವೇ ಸೆಕೆಂಡುಗಳಲ್ಲಿ ಸಾಮಾನ್ಯ ಸ್ಥಿತಿಗೆ ಮರಳುತ್ತೀರಿ.
ನಂತರ, ನೀವು ಕೋಪಗೊಳ್ಳುತ್ತಿರುವಿರಿ ಆದರೆ ಅದು ನಿಮ್ಮ ನಿಯಂತ್ರಣದಲ್ಲಿಲ್ಲ ಎಂದು ನಿಮಗೆ ತಿಳಿದಿರುತ್ತದೆ. ಅರಿವಿನ ಮುಂದಿನ ಹಂತದಲ್ಲಿ, ನಿಮ್ಮ ತಲೆಯಲ್ಲಿ ಶಕ್ತಿಯು ಹೆಚ್ಚುತ್ತಿದೆ ಮತ್ತು ನಿಮ್ಮ ತಲೆ ಬಿಸಿಯಾಗುತ್ತಿದೆ ಎನ್ನುವಾಗಲೇ ನಿಮಗೆ ತಿಳಿಯುತ್ತದೆ. ಅರಿವಿನ ಉನ್ನತ ಹಂತವನ್ನು ನೀವು ತಲುಪಿದಾಗ, ಪ್ರಚೋದನೆಯಿದ್ದರೂ, ಕೋಪಗೊಳ್ಳಲು ಶಕ್ತಿಯು ಏರುವುದಿಲ್ಲ.
ಶುಭೋದಯ ... ನಿಮ್ಮ ಕೋಪವನ್ನು ಗಮನಿಸಿ ...💐
ವೆಂಕಟೇಶ್ - ಬೆಂಗಳೂರು
(9342209728)
ಯಶಸ್ವಿ ಭವ
Comments