2.6.2015
ಪ್ರಶ್ನೆ: ಸರ್, ಪವಾಡದ ಬಗ್ಗೆ ನೀವು ಏನು ಹೇಳುತ್ತೀರಿ?
ಉತ್ತರ: ಏನೋ ಒಂದು ನಡೆಯುತ್ತಿದೆ. ಅದು ಹೇಗೆ ನಡೆಯುತ್ತಿದೆ ಎಂದು ನಿಮಗೆ ತಿಳಿದಿಲ್ಲ. ಅದು ನಿಮ್ಮ ಗ್ರಹಿಕೆಯನ್ನು ಮೀರಿದೆ. ಅದನ್ನು ನೀವು ಪವಾಡ ಎಂದು ಕರೆಯುತ್ತೀರಿ. ಅದು ಹೇಗೆ ನಡೆಯುತ್ತದೆ ಎಂಬುದರ ಕಾರ್ಯವಿಧಾನವನ್ನು ನೀವು ತಿಳಿದುಕೊಳ್ಳುವವರೆಗೂ ಅದು ಪವಾಡವಾಗಿರುತ್ತದೆ. ಅದರ ಕಾರ್ಯವಿಧಾನವನ್ನು ನೀವು ಅರ್ಥಮಾಡಿಕೊಂಡ ನಂತರ, ಅದು ಪವಾಡವಾಗಿ ಉಳಿಯುವುದಿಲ್ಲ.
ತಮಗೆ ತಿಳಿದಿಲ್ಲವೆಂದು ತಿಳಿಯದ ಅಜ್ಞಾನಿಗಳು ತಮ್ಮ ಜೀವನದಲ್ಲಿ ಒಂದು ಪವಾಡಕ್ಕಾಗಿ ಕಾಯುತ್ತಿದ್ದಾರೆ. ತಮಗೆ ಸ್ವಲ್ಪ ತಿಳಿದಿದೆ ಎಂದು ತಿಳಿದಿರುವ ಬುದ್ಧಿಜೀವಿಗಳು ಪವಾಡ ಹೇಗೆ ಸಂಭವಿಸಬಹುದು ಎಂಬುದಕ್ಕೆ ಕಾರಣವನ್ನು ಹುಡುಕುತ್ತಿದ್ದಾರೆ. ತಮಗೆ ತಿಳಿದಿಲ್ಲವೆಂದು ತಿಳಿದಿರುವ ಬುದ್ಧಿವಂತ ಜನರು, ಬ್ರಹ್ಮಾಂಡದಲ್ಲಿ ಎಲ್ಲವೂ ಪವಾಡ ಎಂದು ತಿಳಿದಿದ್ದಾರೆ. ತನ್ನನ್ನು ತಾನು ತಿಳಿದ ವ್ಯಕ್ತಿ ಇತರರಿಗೆ ಪವಾಡ.
ಮೂರ್ಖರು ಪವಾಡಗಳನ್ನು ನಿರೀಕ್ಷಿಸುತ್ತಾರೆ. ಬುದ್ಧಿವಂತಿಕೆಯೇ ಒಂದು ಪವಾಡ.
ಶುಭೋದಯ .... ನೀವೇ ಪವಾಡವಾಗಿರಿ ...💐
ವೆಂಕಟೇಶ್ - ಬೆಂಗಳೂರು
(9342209728)
ಯಶಸ್ವಿ ಭವ
Comments