18.4.2016
ಪ್ರಶ್ನೆ: ಸರ್, 14 ಮತ್ತು 18 ವರ್ಷ ವಯಸ್ಸಿನವರನ್ನು ಧ್ಯಾನ ಮಾಡಲು ಮತ್ತು ಮತ ಚಲಾಯಿಸಲು ಏಕೆ ಶಿಫಾರಸು ಮಾಡಲಾಗಿದೆ?
ಉತ್ತರ: 14 ವರ್ಷದವರೆಗೆ, ನಮ್ಮ ಜೀವಧಾರಕ ಶಕ್ತಿಯು ಮೆದುಳಿನಲ್ಲಿ ಉಳಿದು, ದೈಹಿಕ ಬೆಳವಣಿಗೆಗೆ ಬಳಕೆಯಾಗುತ್ತದೆ. ಒಬ್ಬ ವ್ಯಕ್ತಿಯು ದೈಹಿಕವಾಗಿ ಪೂರ್ಣ ವಿಕಸನ ಪಡೆದಾಗ, ಹೇರಳವಾದ ಶಕ್ತಿಯು ಮೂಲಾಧಾರಕ್ಕೆ ಬರುತ್ತದೆ. ಇದು ಸರಾಸರಿ 14 ವರ್ಷ ವಯಸ್ಸಿನಲ್ಲಿ ಸಂಭವಿಸುತ್ತದೆ. ಮೂಲಾಧಾರದಿಂದ ಮೆದುಳಿಗೆ ಶಕ್ತಿಯನ್ನು ಏರಿಸುವುದನ್ನು ದೀಕ್ಷೆ ಎಂದು ಕರೆಯಲಾಗುತ್ತದೆ. ಕೆಳಗೆ ಬಂದಿರುವ ಶಕ್ತಿಯನ್ನು, ಮತ್ತೆ ಮೇಲೆ ಏರಿಸಬೇಕಿದೆ. ಆದ್ದರಿಂದ, 14 ವರ್ಷದ ನಂತರ ಅಥವಾ ದೇಹವು ಪೂರ್ಣ ವಿಕಸನ ಹೊಂದಿದ ನಂತರ ಧ್ಯಾನಕ್ಕಾಗಿ ದೀಕ್ಷೆಯನ್ನು ನೀಡಲಾಗುತ್ತದೆ. ತಲೆಮಾರುಗಳ ನಡುವೆ ಜೀವನಶೈಲಿ ಬದಲಾದಂತೆ, ಈ ವಯಸ್ಸಿನ ಮಿತಿಯೂ ಬದಲಾಗುತ್ತಿದೆ.
ಮಾನವರು 18 ವರ್ಷ ತುಂಬಿದ ಬಳಿಕ ಮಾನಸಿಕ ಪ್ರಬುದ್ಧತೆಯನ್ನು ತಲುಪುತ್ತಾರೆಂದು, ಸರ್ಕಾರ ಮನಗಂಡಿದೆ. ಆದ್ದರಿಂದ, 18 ವರ್ಷದ ನಂತರ, ಒಬ್ಬ ವ್ಯಕ್ತಿಗೆ ತನ್ನ ನಾಯಕನನ್ನು ಆಯ್ಕೆ ಮಾಡಲು ಮತ್ತು ಅವರ ಜೀವನ ಸಂಗಾತಿಯನ್ನು ಆಯ್ಕೆ ಮಾಡಲು ಅನುಮತಿಸಲಾಗಿದೆ. ಆದರೆ, ವಾಸ್ತವದಲ್ಲಿ, ಹೆಚ್ಚಿನ ಜನರಿಗೆ 18 ವರ್ಷದ ನಂತರವೂ ಆ ಪ್ರಬುದ್ಧತೆ ಇರುವುದಿಲ್ಲ. ಕೆಲವು ಜನರಿಗೆ 18 ವರ್ಷಕ್ಕಿಂತ ಮೊದಲೇ ಪ್ರಬುದ್ಧತೆ ಇರುತ್ತದೆ. ಸರ್ಕಾರವು ಸರಾಸರಿ 18 ವರ್ಷಗಳನ್ನು ನಿಗದಿಪಡಿಸಿದೆ.
ಶುಭೋದಯ .. ದೈಹಿಕವಾಗಿ ಮತ್ತು ಮಾನಸಿಕವಾಗಿ ಪ್ರಬುದ್ಧತೆಯನ್ನು ಸಾಧಿಸಿ ...💐
ವೆಂಕಟೇಶ್ - ಬೆಂಗಳೂರು
(9342209728)
ಯಶಸ್ವಿ ಭವ
Comentários