26.3.2016
ಪ್ರಶ್ನೆ: ಸರ್, ಹೋಳಿ ಹಬ್ಬದ ಮಹತ್ವವೇನು?
ಉತ್ತರ: ಹೋಳಿ ಹಬ್ಬವು ತುಂಬಾ ರೋಮಾಂಚಕ ಮತ್ತು ವಿನೋದಮಯ ಹಬ್ಬ. ಇದು ಜನರಲ್ಲಿ ಬಹಳ ಸಂತೋಷ ಮತ್ತು ಉತ್ಸಾಹವನ್ನು ತರುತ್ತದೆ. ಈ ಹಬ್ಬವು ಮನುಷ್ಯರು ಜೀವನವನ್ನು ಗಂಭೀರವಾಗಿ ಪರಿಗಣಿಸದಂತೆ ನೆನಪಿಸುತ್ತದೆ ಮತ್ತು ಮೋಜು ಮಾಡಲು ಪ್ರೋತ್ಸಾಹಿಸುತ್ತದೆ. ಇದು ಜನರ ನಡುವಿನ ದ್ವೇಷವನ್ನು ನಾಶಪಡಿಸುತ್ತದೆ ಮತ್ತು ಸ್ನೇಹವನ್ನು ಬೆಳೆಸುತ್ತದೆ. ಇದು ಸಾಮಾಜಿಕ ಆರೋಗ್ಯ ಉತ್ತಮವಾಗುವಲ್ಲಿ ಕಾರಣವಾಗುತ್ತದೆ. ನೀವು ಪರಸ್ಪರ ಉತ್ಸಾಹದಿಂದ ಬಣ್ಣದಲ್ಲಿ ಆಟವಾಡುತ್ತಿರುವುದರಿಂದ, ಇದು ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹೆಚ್ಚಿಸುತ್ತದೆ.
ಜೀವನವು ಬಹು ವೈವಿಧ್ಯ ಎಂದು ಇದು ನಮಗೆ ನೆನಪಿಸುತ್ತದೆ. ನಾವು ಜೀವನದ ಎಲ್ಲಾ ಆಯಾಮಗಳನ್ನು ಅನುಭವಿಸಬೇಕು. ಜೀವನವು ನಿಮಗೆ ಏನು ನೀಡುತ್ತದೋ ಅದನ್ನು ನೀವು ಒಪ್ಪಿಕೊಂಡರೆ, ನಿಮ್ಮ ಜೀವನವು ವರ್ಣಮಯವಾಗುತ್ತದೆ. ನೀವು ಜೀವನಕ್ಕೆ ಶರಣಾದಾಗ, ಅದು ಆಧ್ಯಾತ್ಮಿಕ ಆರೋಗ್ಯಕ್ಕೆ ಕಾರಣವಾಗುತ್ತದೆ. ವರ್ಣರಂಜಿತ ಜೀವನವು ಒಂದು ಆಚರಣೆ, ಏಕೆಂದರೆ ಅದು ನಿಮಗೆ ಒಂದೊಂದು ಕ್ಷಣಕ್ಕೂ ಆಶ್ಚರ್ಯವನ್ನು ನೀಡುತ್ತದೆ. ಮುಂದೆ ಏನು ಬರಲಿದೆ ಎಂದು ನಿಮಗೆ ತಿಳಿದಿಲ್ಲ. ಹೋಳಿ ನಕಾರಾತ್ಮಕತೆಯನ್ನು ನಾಶಪಡಿಸಿ, ಸಕಾರಾತ್ಮಕತೆಯನ್ನು ಸೃಷ್ಟಿಸುತ್ತದೆ.
ಶುಭೋದಯ .. ನಿಮ್ಮ ಜೀವನ ವರ್ಣಮಯವಾಗಿರಲಿ.
ವೆಂಕಟೇಶ್ - ಬೆಂಗಳೂರು
(9342209728)
Comments