15.7.2015
ಪ್ರಶ್ನೆ: ಸರ್, ಸಾಮಾನ್ಯ ಜನರಿಗೆ ಹೋಲಿಸಿದರೆ ಸೂಕ್ಷ್ಮ ಜನರು ಯಾಕೆ ಬೇಗ ನೋವಿಗುಂಟಾಗುತ್ತಾರೆ? ಇದು ಅವರ ಹುಟ್ಟುಗುಣವೇ? ಸೂಕ್ಷ್ಮತೆಯು ದೌರ್ಬಲ್ಯವೇ?
ಉತ್ತರ: ಸೂಕ್ಷ್ಮತೆಯು ಅರಿವಿನ ಗುಣವಾಗಿದೆ. ನೀವು ಹೆಚ್ಚು ಸೂಕ್ಷ್ಮವಾಗಿದ್ದರೆ, ನೀವು ಹೆಚ್ಚಿನ ಮಟ್ಟದ ಅರಿವನ್ನು ಹೊಂದಿದ್ದೀರಿ ಎಂದರ್ಥ. ಕೆಲವು ಜನರು ಸಾಮಾನ್ಯ ಜನರಿಗಿಂತ ಹೆಚ್ಚಿನ ಸೂಕ್ಷ್ಮತೆಯೊಂದಿಗೆ ಜನಿಸಿರುತ್ತಾರೆ. ಆದರೆ ಯಾರು ಬೇಕಾದರೂ ಇದನ್ನು ಬೆಳಸಿಕೊಳ್ಳಬಹುದು. ಸೂಕ್ಷ್ಮತೆ ನವಿರಾಗಿರುತ್ತದೆ. ಸೂಕ್ಷ್ಮವಲ್ಲದ ಸ್ಥಿತಿ ಅಸಭ್ಯವಾಗಿದೆ. ನೀವು ಹೆಚ್ಚು ಸೂಕ್ಷ್ಮವಾಗಿದ್ದಷ್ಟು, ಹೆಚ್ಚು ನವಿರಾಗಿ ಮತ್ತು ಸೌಮ್ಯರಾಗಿರುತ್ತೀರಿ.
ಸೂಕ್ಷ್ಮತೆಯು ದೌರ್ಬಲ್ಯವಲ್ಲ. ಇದು ರಕ್ಷಣೆಯಿಲ್ಲದ ಹೂವಿನಂತೆ ಮೃದುವಾಗಿರುತ್ತದೆ. ಒಂದು ಪ್ಲಾಸ್ಟಿಕ್ ಹೂವು ಗಡಸಾಗಿರುವುದರಿಂದ ಸುರಕ್ಷಿತವಾಗಿರುತ್ತದೆ. ನೀವು ಅದನ್ನು ನೋಯಿಸಲು ಸಾಧ್ಯವಿಲ್ಲ. ಆದರೆ ನಿಜವಾದ ಹೂವು ಮೃದು ಮತ್ತು ಹೆಚ್ಚು ಸೂಕ್ಷ್ಮವಾಗಿರುತ್ತದೆ. ಯಾರು ಬೇಕಾದರೂ ಅದನ್ನು ನೋಯಿಸಬಹುದು.
ನೋವುಂಟಾಗಲು ಎರಡು ಕಾರಣಗಳಿರಬಹುದು.
1. ದುರ್ಬಲತೆ
2. ಗಾಯ
ನೀವು ಆಧ್ಯಾತ್ಮಿಕ ಹಾದಿಯಲ್ಲಿರುವಾಗ, ನಿಮ್ಮ ಸೂಕ್ಷ್ಮತೆಯು ಹೆಚ್ಚಾಗುತ್ತದೆ ಮತ್ತು ನೀವು ಎಚ್ಚರವಾಗಿರುತ್ತೀರಿ. ನೀವು ಸಾಮಾನ್ಯ ಜನರಿಗಿಂತ ಭಿನ್ನರಾಗಿರುತ್ತೀರಿ. ಸಾಮಾನ್ಯ ಜನರು ಕಡಿಮೆ ಸಂವೇದನಾಶೀಲರು. ಅವರು ನಿಮ್ಮಲ್ಲಿನ ವ್ಯತ್ಯಾಸವನ್ನು ನೋಡುತ್ತಾರೆ. ಕೀಳರಿಮೆ ಸಂಕೀರ್ಣದಿಂದಾಗಿ ತಮ್ಮನ್ನು ರಕ್ಷಿಸಿಕೊಳ್ಳಲು ಅವರು ನಿಮ್ಮನ್ನು ನೋಯಿಸಬಹುದು. ಅಥವಾ ಅವರು ನಿಮ್ಮಿಂದ ದೂರವಾಗುತ್ತಾರೆ. ನೀವು ಸಾಮಾನ್ಯ ಜನರಿಗೆ ದಯೆ ತೋರಿಸಿದರೆ, ಅವರೂ ಹೆಚ್ಚು ಸೂಕ್ಷ್ಮತೆಯುಳ್ಳವರಾಗುತ್ತಾರೆ. ಎಲ್ಲಾ ಮಾನವರು ಹೆಚ್ಚು ಸೂಕ್ಷ್ಮತೆಯುಳ್ಳವರಾಗಬೇಕಿದೆ.
ನಿಮಗೆ ಗಾಯವಾದರೆ ನೀವು ಶೀಘ್ರವಾಗಿ ನೋವನ್ನು ಅನುಭವಿಸುತ್ತೀರಿ. ಮುಕ್ತತೆಯಿಂದಾಗಿ. ಗಾಯದ ಸುತ್ತಲಿನ ಪದರವನ್ನು ನೀವು ಕೈಬಿಟ್ಟೀದ್ದೀರಿ. ಅದಕ್ಕಾಗಿಯೇ ನೀವು ನೀವು ಶೀಘ್ರವಾಗಿ ನೋವನ್ನು ಅನುಭವಿಸುತ್ತೀರಿ. ಕಡಿಮೆ ಸೂಕ್ಷ್ಮತೆಯುಳ್ಳ ಜನರು ಬೇಗನೆ ಗಾಯಗೊಳ್ಳುವುದಿಲ್ಲ. ಏಕೆಂದರೆ ಅವರು ಗಾಯದ ಸುತ್ತಲೂ ಅನೇಕ ಪದರಗಳನ್ನು ಹೊಂದಿರುತ್ತಾರೆ. ಅವರು ಅದನ್ನು ರಕ್ಷಿಸುತ್ತಿದ್ದಾರೆ. ಮತ್ತು ಅವರು ಗಾಯಗಳನ್ನು ಹೊಂದಿಲ್ಲ ಎಂದು ಭಾವಿಸುತ್ತಾರೆ.
ಬೇಗನೆ ಗಾಯಗೊಳ್ಳುವುದು ಉತ್ತಮ. ಏಕೆಂದರೆ ನೀವು ಗಾಯವನ್ನು ಗ್ರಹಿಸಲು ಸಾಧ್ಯವಾಗುತ್ತದೆ. ನೀವು ಗಾಯವನ್ನು ಸ್ವೀಕರಿಸಿ ಕಾಳಜಿ ವಹಿಸಿದರೆ ಅದು ಗುಣವಾಗುತ್ತದೆ. ಯಾರು ಬೇಕಾದರೂ ಹೂವನ್ನು ಮುಟ್ಟಿ ನೋವುಂಟು ಮಾಡಬಹುದು. ನಿಮ್ಮ ಸೂಕ್ಷ್ಮತೆಯು ಬೆಳೆದಂತೆ, ನೀವು ಮುಂದಿನ ಹಂತಕ್ಕೆ ರೂಪಾಂತರಗೊಳ್ಳುತ್ತೀರಿ. ನೀವು ಗಾಳಿಯಂತೆ ಮೃದುವಾಗಿರುತ್ತೀರಿ. ಯಾರಿಗೂ ಗಾಳಿಯನ್ನು ಮುಟ್ಟಿ ನೋಯಿಸಲು ಸಾಧ್ಯವಿಲ್ಲ. ಆದರೆ ಗಾಳಿಯು ಎಲ್ಲರನ್ನೂ ಮುಟ್ಟಬಲ್ಲದು.
ಶುಭೋದಯ .... ಗಾಳಿಯಂತಿರಿ...💐
ವೆಂಕಟೇಶ್ - ಬೆಂಗಳೂರು
(9342209728)
ಯಶಸ್ವಿ ಭವ
Comments