31.5.2015
ಪ್ರಶ್ನೆ: ವೈವಾಹಿಕ ಜೀವನದಲ್ಲಿ ಏನು ಕೊರತೆಯಿದೆ?
ಉತ್ತರ: ಹೆಚ್ಚಿನ ಕುಟುಂಬಗಳಲ್ಲಿ ಪ್ರೀತಿಯ ಕೊರತೆಯಿದೆ. ಪ್ರೀತಿಯ ಕೊರತೆಯು ಜೀವನದ ಸಮಸ್ಯೆಗಳಿಗೆ ಮುಖ್ಯ ಕಾರಣವಾಗಿದೆ. ಸಮಾಜವು ಪ್ರೀತಿಯನ್ನು ಖಂಡಿಸುವ ಕಾರಣ ಅದನ್ನು ನಿಗ್ರಹಿಸಲಾಗಿದೆ. ಸಮಾಜವು ಪ್ರೀತಿಗೆ ಪರ್ಯಾಯವಾಗಿ ಕರ್ತವ್ಯ ಪ್ರಜ್ಞೆ ಎಂಬುದನ್ನು ಕಂಡುಕೊಂಡಿದೆ.
ಕರ್ತವ್ಯವು ಒಂದು ನಿರ್ದಿಷ್ಟ ಮಟ್ಟದವರೆಗೆ ಸಮಸ್ಯೆಗಳನ್ನು ಪರಿಹರಿಸುತ್ತದೆ ಆದರೆ ಸಂಪೂರ್ಣವಾಗಿ ಪರಿಹರಿಸುವುದಿಲ್ಲ. ಕರ್ತವ್ಯವು ಪ್ರೀತಿಯ ಅನುಪಸ್ಥಿತಿಯಲ್ಲಿ, ಕಾರ್ಯರೂಪಕ್ಕೆ ಬರುತ್ತದೆ. ಪ್ರೀತಿಯನ್ನು ಬಲವಂತವಾಗಿ ತರಲು ಸಾಧ್ಯವಿಲ್ಲ. ಆದ್ದರಿಂದ ಕರ್ತವ್ಯವು ಕೆಲವು ಕೆಲಸಗಳನ್ನು ಮಾಡಲು ನಿಮ್ಮನ್ನು ಒತ್ತಾಯಿಸುತ್ತದೆ. ಇದು ಸಮಾಜದ ಹೊರೆಯನ್ನು ಕಡಿಮೆ ಮಾಡುತ್ತದೆ ಆದರೆ ಪರೋಕ್ಷವಾಗಿ ಅನೇಕ ಸಮಸ್ಯೆಗಳನ್ನು ಸೃಷ್ಟಿಸುತ್ತದೆ.
ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹರಿಸಲು ಪ್ರೀತಿಯ ಅರಿವನ್ನು ಶ್ಲಾಘಿಸಿ, ಪ್ರೋತ್ಸಾಹಿಸಬೇಕು.
ಶುಭೋದಯ ... ಪ್ರೀತಿಯನ್ನು ಶ್ಲಾಘಿಸಿ ...💐
ವೆಂಕಟೇಶ್ - ಬೆಂಗಳೂರು
(9342209728)
ಯಶಸ್ವಿ ಭವ
Comments