21.4.2016
ಪ್ರಶ್ನೆ: ಸರ್, ಮನಸ್ಸಿನಲ್ಲಿ ಸ್ಪಷ್ಟತೆ, ಶಕ್ತಿಯ ಮಟ್ಟ ಮತ್ತು ಚಟುವಟಿಕೆಯ ದೃಷ್ಟಿಯಿಂದ ನಾನು ದಿನದಿಂದ ದಿನಕ್ಕೆ ಯುವಕನಾಗುತ್ತಿದ್ದೇನೆ ಎಂದು ನಾನು ಭಾವಿಸುತ್ತೇನೆ... ಆದರೆ ನಾನು ಕನ್ನಡಿಯಲ್ಲಿ ನನ್ನನ್ನು ನೋಡಿಕೊಂಡಾಗ ನಾನು ದೈಹಿಕವಾಗಿ ಬದಲಾಗುತ್ತಿರುವುದು ಕಂಡುಬರುತ್ತಿದೆ, ನನಗೆ ವಯಸ್ಸಾಗುತ್ತಿದೆ, ಇದರ ಅರ್ಥವೇನು?
ಉತ್ತರ: ಎಲ್ಲಿಯವರೆಗೆ ನೀವು ಹೊಸ ವಿಷಯಗಳನ್ನು ತಿಳಿಯಲು / ಕಲಿಯಲು ಉತ್ಸುಕರಾಗಿರುತ್ತೀರೋ ಅಲ್ಲಿಯವರೆಗೆ ನಿಮಗೆ ಯುವ ಮತ್ತು ಶಕ್ತಿಯುತ ಅನುಭವವಾಗುತ್ತದೆ. ನೀವು ಸಕ್ರಿಯರಾಗಿರುತ್ತೀರಿ. ನಿಮ್ಮ ದೇಹಕ್ಕೆ ಸಹ ಶೀಘ್ರವಾಗಿ ವಯಸ್ಸಾಗುವುದಿಲ್ಲ. ಆದರೆ ಹೊಸತನ್ನು ತಿಳಿಯಲು / ಕಲಿಯಲು ಏನೂ ಇಲ್ಲ ಎಂದು ನೀವು ಭಾವಿಸಿದರೆ, ಇದರರ್ಥ ನಿಮಗೆ ಎಲ್ಲವೂ ತಿಳಿದಿದೆ, ಅಂದರೆ ಪ್ರಬುದ್ಧತೆಯನ್ನು ಸಾಧಿಸಿದ್ದೀರಿ ಎಂದು. ಆಗ ಶೀಘ್ರದಲ್ಲೇ ನಿಮ್ಮ ಕೂದಲು ಬೆಳ್ಳಗಾಗಬಹುದು. ನಿಮ್ಮ ಚಟುವಟಿಕೆಗಳು ಪ್ರಬುದ್ಧವಾಗಿರುತ್ತವೆ. ಒಮ್ಮೆ ನೀವು ಪ್ರಜ್ಞೆಯ ಸ್ಥಿತಿಯನ್ನು ಸಾಧಿಸಿದರೆ, ನೀವು ಚಿಕ್ಕವರು ಅಥವಾ ವಯಸ್ಸಾದವರು ಎಂಬುದರ ಅನುಭವವಾಗುವುದಿಲ್ಲ, ಮತ್ತು ನಿಮಗೆ ಜನನ ಮತ್ತು ಮರಣದ ಕಲ್ಪನೆ ಇರುವುದಿಲ್ಲ.
ಆದರೆ ಪರಿಸ್ಥಿತಿಗೆ ಅನುಗುಣವಾಗಿ, ನೀವು ಮಗುವಿನಂತೆ ಪ್ರತಿಕ್ರಿಯಿಸಬಹುದು ಅಥವಾ ಪ್ರಬುದ್ಧರಾಗಿ ಪ್ರತಿಕ್ರಿಯಿಸಬಹುದು. ಮತ್ತು ನೀವು ಶಾಶ್ವತವಾದಂತಹ ಭಾವನೆಯನ್ನು ಹೊಂದಿರುತ್ತೀರಿ. ಏನೇ ಇರಲಿ, ದೇಹಕ್ಕೆ ವಯಸ್ಸಾಗುವುದು ಸಹಜ. ಆದ್ದರಿಂದ ನೀವು ಕನ್ನಡಿಯಲ್ಲಿ ನಿಮ್ಮನ್ನು ನೋಡಿಕೊಂಡಾಗ, ನಿಮ್ಮ ದೇಹಕ್ಕೆ ವಯಸ್ಸಾಗುತ್ತಿರುವುದನ್ನು ನೀವು ಗಮನಿಸುತ್ತೀರಿ.
ಶುಭೋದಯ ... ಯೌವ್ವನ ಮತ್ತು ವೃದ್ಧಾಪ್ಯವನ್ನು ಮೀರಿ ಬದುಕಿ..💐
ವೆಂಕಟೇಶ್ - ಬೆಂಗಳೂರು
(9342209728)
ಯಶಸ್ವಿ ಭವ
コメント