17.6.2016
ಪ್ರಶ್ನೆ: ಸರ್ .. 'ಯೋಗವು ಒಂದು ಜೀವನ ವಿಧಾನ' ಎಂಬುದನ್ನು ದಯವಿಟ್ಟು ವಿವರಿಸಿ.
ಉತ್ತರ: ದೇಹ ಮತ್ತು ಮನಸ್ಸುಗಳ ನಡುವೆ ಸಾಮರಸ್ಯವಿಲ್ಲದಿದ್ದರೆ, ಅದು ದೇಹದಲ್ಲಿ ಅನಾರೋಗ್ಯಕ್ಕೆ ಕಾರಣವಾಗಬಹುದು. ಮನಸ್ಸು ಮತ್ತು ಪ್ರಾಣಶಕ್ತಿಗಳ ನಡುವೆ ಸಾಮರಸ್ಯವಿಲ್ಲದಿದ್ದರೆ, ಮಾನಸಿಕ ಆರೋಗ್ಯವು ಹಾಳಾಗುತ್ತದೆ. ನೀವು ಮತ್ತು ನಿಮ್ಮ ಸಮುದಾಯದ ನಡುವೆ ಸಾಮರಸ್ಯವಿಲ್ಲದಿದ್ದರೆ, ನಿಮ್ಮ ಜೀವನವು ಸಮಸ್ಯಾತ್ಮಕವಾಗುತ್ತದೆ. ನೀವು ಮತ್ತು ಪ್ರಕೃತಿಯ ನಡುವೆ ಸಾಮರಸ್ಯವಿಲ್ಲದಿದ್ದರೆ, ನೀವು ನಿಮ್ಮ ಜೀವವನ್ನು ಕಳೆದುಕೊಳ್ಳುತ್ತೀರಿ.
ದೇಹ ಮತ್ತು ಮನಸ್ಸು, ಮನಸ್ಸು ಮತ್ತು ಪ್ರಾಣಶಕ್ತಿ, ಸ್ವಯಂ ಮತ್ತು ಸಮುದಾಯ, ಸ್ವಯಂ ಮತ್ತು ಪ್ರಕೃತಿಯ ನಡುವಿನ ಸಾಮರಸ್ಯವನ್ನು ಕಾಪಾಡುವುದೇ ಯೋಗ. ಯೋಗ ಎಂದರೆ ಒಂದಾಗುವುದು ಎಂದರ್ಥ. ಸಾಮರಸ್ಯವು ಏಕತೆಗೆ ಕಾರಣವಾಗುತ್ತದೆ. ಪ್ರತ್ಯೇಕತೆಯು ನೋವಿಗೆ ಕಾರಣವಾಗುತ್ತದೆ. ತನಗೂ ಮತ್ತು ಇತರ ಜೀವಿಗಳಿಗೆ ಹಾನಿಯಾಗದಂತೆ ನಿಮ್ಮ ಜೀವನವನ್ನು ನಡೆಸಲು ಯೋಗವು ಕಲಿಸುತ್ತದೆ. ಇತರರ ದುಃಖವನ್ನು ತೆಗೆದುಹಾಕಲು ಸಹ ಇದು ಮಹತ್ವ ನೀಡುತ್ತದೆ. ಆದ್ದರಿಂದ, ಯೋಗವು ಒಂದು ಜೀವನ ವಿಧಾನವಾಗಿದೆ. ವಾಸ್ತವವಾಗಿ, ಇದು ಉನ್ನತ ಜೀವನ ವಿಧಾನ.
ಶುಭೋದಯ... ಯೋಗಿಯ ಜೀವನ ನಡೆಸಿ...💐
ವೆಂಕಟೇಶ್ - ಬೆಂಗಳೂರು
(9342209728)
ಯಶಸ್ವಿ ಭವ
Comments