10.7.2015
ಪ್ರಶ್ನೆ: ಸರ್, ಅಂದು ನೀವು ಗಾಯವನ್ನು ತೆರೆದಿಡಿ ಮತ್ತು ಅದು ವಾಸಿಯಾಗುತ್ತದೆ ಎಂದು ಹೇಳಿದ್ದಿರಿ. ಮಾನಸಿಕ ಗಾಯಗಳನ್ನು ತೆರೆದಿಡುವುದು ಹೇಗೆ?
ಉತ್ತರ: ನೀವು ವಿಮರ್ಶನಾತ್ಮಕರಾಗದಿದ್ದಾಗ, ನಿಮ್ಮ ಮನಸ್ಸು ಏಕವಾಗಿರುತ್ತದೆ. ನಿಮ್ಮ ಆಲೋಚನೆಗಳು, ಆಸೆಗಳು, ಭಾವನೆಗಳು ಮತ್ತು ಅನುಭವಗಳನ್ನು ಒಳ್ಳೆಯದು ಮತ್ತು ಕೆಟ್ಟದು ಎಂದು ನೀವು ನಿರ್ಣಯಿಸಿದಾಗ, ನಿಮ್ಮ ಮನಸ್ಸು ಎರಡು ಭಾಗಗಳಾಗಿ ವಿಭಜನೆಯಾಗುತ್ತದೆ.ನೀವು ಒಳ್ಳೆಯದನ್ನು ಅನುಮತಿಸಿ, ಕೆಟ್ಟದ್ದನ್ನು ನಿಗ್ರಹಿಸುತ್ತೀರಿ. ನಿಗ್ರಹಿಸಲ್ಪಟ್ಟದ್ದು ಸುಪ್ತಾವಸ್ಥೆಯ ಮನಸ್ಸಿಗೆ ಹೋಗುತ್ತದೆ. ಮತ್ತು ಅದು ಮಾನಸಿಕ ಗಾಯವಾಗುತ್ತದೆ. ಆದ್ದರಿಂದ, ನಿಗ್ರಹಿಸಬೇಡಿ. ಯಾವುದನ್ನೂ ಖಂಡಿಸಬೇಡಿ. ನೀವು ಖಂಡಿಸಿದರೆ, ಅದು ನಿಮ್ಮ ಮನಸ್ಸಿನ ಕರಾಳ ಭಾಗದಲ್ಲಿ ಅಡಗಿಕೊಳ್ಳುತ್ತದೆ.
ಒಳಗೆ ಏನಿರುತ್ತದೋ, ಅದು ಹೊರಬರುತ್ತದೆ. ನೀವು ಅದನ್ನು ಅನುಮತಿಸದಿದ್ದರೆ, ಅದು ಎಲ್ಲಿಗೆ ಹೋಗುತ್ತದೆ?
ಅದು ಮತ್ತೆ ಒಳಗೆ ಹೋಗಿ, ಹೊರಬರಲು ಮತ್ತೊಂದು ಅವಕಾಶ ಬರುವವರೆಗೂ ಕಾಯುತ್ತಿರುತ್ತದೆ. ನೀವು ನಿಗ್ರಹಿಸುತ್ತಲೇ ಇದ್ದರೆ, ಅದು ಗಾಯವಾಗುತ್ತದೆ. ನೀವು ಕೆಟ್ಟದ್ದಕ್ಕೆ ಹೆದರುತ್ತೀರಿ. ಅದಕ್ಕಾಗಿಯೇ ನೀವು ಅದನ್ನು ನಿಗ್ರಹಿಸುತ್ತೀರಿ. ಅದನ್ನು ಒಳ್ಳೆಯದು ಅಥವಾ ಕೆಟ್ಟದು ಎಂದು ನಿರ್ಣಯಿಸದೆ, ಎಲ್ಲವನ್ನೂ ಹೊರಬರಲು ಬಿಡಿ. ಆದರೆ ನೀವು ತಪ್ಪದೆ ಎಲ್ಲವನ್ನೂ ಗಮನಿಸಬೇಕು. ಆ ವೀಕ್ಷಣೆಯೇ ಔಷಧ. ಇದು ಗಾಯವನ್ನು ಗುಣಪಡಿಸುತ್ತದೆ. ನೀವು ವಿಮರ್ಶನಾತ್ಮಕರಾಗದೆ ಗಮನಿಸಿದಾಗ, ನಿಮ್ಮ ಮನಸ್ಸಿನಲ್ಲಿನ ವಿಭಜನೆಗಳು ಮಾಯವಾಗುತ್ತವೆ. ವೀಕ್ಷಣೆ ವಿಭಜನೆಗಳನ್ನು ಒಂದುಗೂಡಿಸುತ್ತದೆ.
ಶುಭೋದಯ .... ಅವಿನಾಭಾವಿಯಾಗಿರಿ...💐
ವೆಂಕಟೇಶ್ - ಬೆಂಗಳೂರು
(9342209728)
ಯಶಸ್ವಿ ಭವ
Kommentare