5.5.2016
ಪ್ರಶ್ನೆ: ಸರ್, ಹೇಗೆ ಬದುಕಬೇಕು, ಹೇಗೆ ಪ್ರೀತಿಸಬೇಕು, ಹೇಗೆ ಸೇವೆ ಮಾಡಬೇಕು ಮತ್ತು ಹೇಗೆ ಈ ಜಗತ್ತನ್ನು ತೊರೆಯುಬೇಕು?
ಉತ್ತರ: ನಿಮಗಾಗಿ ಬದುಕಿ. ಇತರ ಜನರ ಅಭಿಪ್ರಾಯಗಳ ಬಗ್ಗೆ ಚಿಂತಿಸಬೇಡಿ. ನಿಮ್ಮನ್ನು ಇತರರೊಂದಿಗೆ ಹೋಲಿಸಬೇಡಿ. ಮತ್ತು ಯಾರಿಗೂ ತೊಂದರೆ ಕೊಡಬೇಡಿ. ಯಾವುದೇ ನಿರೀಕ್ಷೆಯಿಲ್ಲದೆ ಎಲ್ಲರನ್ನು ಪ್ರೀತಿಸಿ. ಇದನ್ನು ನಿಮ್ಮ ಜೀವನದ ಕೊನೆಯ ಕ್ಷಣವೆಂದು ಎಣಿಸಿ, ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಿ. ಪ್ರೀತಿ ನಿಮ್ಮ ಅಹಂಕಾರವನ್ನು ಕರಗಿಸಲಿ. ನಿಮ್ಮ ಪ್ರೀತಿ ಇತರರ ಅಂತರಂಗವನ್ನು ತುಂಬಲಿ.
ಸಹಾಯದ ಅಗತ್ಯವಿರುವವರಿಗೆ ಅವರು ಕೇಳುವ ಮೊದಲು ಸಹಾಯ ಮಾಡಿ. ಹೊಗಳಿಕೆಗಾಗಿ ಅಲ್ಲ, ಆದರೆ ನಿಮ್ಮ ಅಸ್ತಿತ್ವದ ಒಂದು ಭಾಗವು ಬಳಲುತ್ತಿದೆ ಎಂಬ ಭಾವನೆಯೊಂದಿಗೆ ಸೇವೆ ಮಾಡಿ. ನಿಮ್ಮ ಸೇವೆಯು ನಿಮ್ಮಲ್ಲಿ ಸಹಾನುಭೂತಿಯನ್ನು ಬೆಳೆಸಲಿ. ಕೊನೆಯಲ್ಲಿ ನಿಮ್ಮ ದೇಹವನ್ನು ಸಂಪೂರ್ಣ ತೃಪ್ತಿಯಿಂದ ಬಿಡಿ. ಯಾವುದೇ ಅತೃಪ್ತ ಆಸೆ ಇಟ್ಟುಕೊಳ್ಳಬೇಡಿ. ದೇಹವನ್ನು ಬಿಡಿ ಮತ್ತು ಎಲ್ಲೆಡೆ ಅಸ್ತಿತ್ವದಲ್ಲಿರುವ ಸ್ಥಿತಿಯನ್ನು ತಲುಪಿ.
ಶುಭೋದಯ ... ಬದುಕಿ, ಪ್ರೀತಿಸಿ, ಸೇವೆ ಮಾಡಿ ಮತ್ತು ಬಿಡಿ ..💐
ವೆಂಕಟೇಶ್ - ಬೆಂಗಳೂರು
(9342209728)
ಯಶಸ್ವಿ ಭವ
Comments