7.6.2015
ಪ್ರಶ್ನೆ: ಸರ್, "ಪ್ರೀತಿಯನ್ನು ಮಾಡುವ ಕಲೆ" ಬಗ್ಗೆ ಏನಾದರೂ ಹೇಳಿ.
ಉತ್ತರ: ಕಾಮವು ಸಮಸ್ಯೆಯಾದರೆ, ಅದನ್ನು ಪರಿಹರಿಸಲು ನಿಮಗೆ ಸೂತ್ರದ ಅಗತ್ಯವಿದೆ. ಆ ಸೂತ್ರವೇ ಕಾಮ ಸೂತ್ರ. ಕಾಮಸೂತ್ರವನ್ನು ಸಾವಿರಾರು ವರ್ಷಗಳ ಹಿಂದೆ ರೂಪಿಸಲಾಗಿದ್ದರೂ, ಅದನ್ನು ಸರಿಯಾಗಿ ಕಲಿಸಲಾಗಿಲ್ಲ. ಈ ಸಮಾಜವು ವೈವಾಹಿಕ ಜೀವನವನ್ನು ಹೇಗೆ ನಡೆಸಬೇಕೆಂದು ಕಲಿಸದೆ ಪ್ರತಿಯೊಬ್ಬರನ್ನು ಮದುವೆಯಾಗಬೇಕೆಂದು ಒತ್ತಾಯಿಸುತ್ತದೆ. ಇದು ಅಚ್ಚರಿಯ ಸಂಗತಿ.
ಮದುವೆಗೆ ಮುಂಚೆ ಎಲ್ಲರಿಗೂ, ಪ್ರೀತಿ ಮಾಡುವ ಕಲೆ ಕಲಿಸುವ "ಕಾಮ ಸೂತ್ರ", ಲೈಂಗಿಕ ದ್ರವದ ಗುಣಮಟ್ಟ ಮತ್ತು ಪ್ರಮಾಣವನ್ನು ಸುಧಾರಿಸುವ ತಂತ್ರಗಳು ಮತ್ತು ಜೀವನದ ಬಗ್ಗೆ ಎಲ್ಲವನ್ನೂ ಕಲಿಸುವ ತಿರುಕ್ಕುರಲ್, ಇವುಗಳ ಬಗ್ಗೆ ಹೇಳಿಕೊಡಬೇಕು.
ಕಾಮಸೂತ್ರವು ಶಕ್ತಿಯನ್ನು ಕೆಳಮಟ್ಟದಿಂದ ಉನ್ನತ ಮಟ್ಟಕ್ಕೆ ಹೇಗೆ ಏರಿಸುವುದು ಎಂಬುದರ ಬಗ್ಗೆ ಕಲಿಸುತ್ತದೆ. ಕಾಮಸೂತ್ರದ ಅನುಷ್ಠಾನಕ್ಕೆ ತಂತ್ರ ಯೋಗ ಎಂದು ಹೆಸರು. ಕಾರ್ಯ ಸಿದ್ಧಿ ಯೋಗದಲ್ಲಿ ಕಲಿಸಲಾಗುವ ಆತ್ಮ ಸಂಗಾತಿ (soulmate meditation) ಧ್ಯಾನವು ತಂತ್ರ ಯೋಗದ ಮುಂದುವರಿದ ಹಂತವಾಗಿದೆ.
ತಿರುಕ್ಕುರಲ್ ಪುಸ್ತಕದ ಮೂರನೇ ಒಂದು ಭಾಗವು ಪ್ರೀತಿಯ ಬಗ್ಗೆ ಹಂತ ಹಂತವಾಗಿ ಮಾತನಾಡುತ್ತದೆ. ಇದರಲ್ಲಿ ಪ್ರಣಯ, ವಿವಾಹಪೂರ್ವ ಪ್ರೀತಿ, ವಿವಾಹ ನಂತರದ ಪ್ರೀತಿ, ಸೌಂದರ್ಯದ ಹೊಗಳಿಕೆ, ಶಾರೀರಿಕ ಬದಲಾವಣೆಗಳು, ಮಾನಸಿಕ ಬದಲಾವಣೆಗಳು ಮತ್ತು ಇನ್ನೂ ಅನೇಕವು ಸೇರಿವೆ. ತಿರುಕ್ಕುರಲ್‌ನ ಈ ಭಾಗವು ಪ್ರೀತಿ ಮಾಡುವ ಕಲೆಯನ್ನು ಮಾತ್ರವಲ್ಲದೆ ಸಂಬಂಧಗಳನ್ನು ಬೆಳೆಸುವ ಕಲೆಯನ್ನೂ ಕಲಿಸುತ್ತದೆ.
ಶುಭೋದಯ ...ಸೂತ್ರವನ್ನು ತಿಳಿದುಕೊಳ್ಳಿ ಮತ್ತು ಸಮಸ್ಯೆಯನ್ನು ಪರಿಹರಿಸಿ ...💐
ವೆಂಕಟೇಶ್ - ಬೆಂಗಳೂರು
(9342209728)
ಯಶಸ್ವಿ ಭವ
Comments