14.6.2015
ಪ್ರಶ್ನೆ: ಸರ್, ಯಾರಾದರೂ ತಮ್ಮ ಪಾದಗಳನ್ನು ಮುಟ್ಟಿದಾಗ ಜನರು ಏಕೆ ಸಂತೋಷಪಡುತ್ತಾರೆ?
ಉತ್ತರ: ನೀವು ಒಬ್ಬರ ಪಾದಗಳನ್ನು ಮುಟ್ಟಿದಾಗ ಅವರು ಶ್ರೇಷ್ಠರು ಎಂದು ಮೂರ್ಖರು ಭಾವಿಸುತ್ತಾರೆ. ಅದರಿಂದ ಅವರ ಅಹಂಕಾರ ತೃಪ್ತಿಗೊಳ್ಳುತ್ತದೆ. ಅವರ ಪಾದಗಳನ್ನು ಮುಟ್ಟಿದ್ದರಿಂದ ತಮ್ಮ ಅಹಂಕಾರವನ್ನು ಕೈಬಿಟ್ಟಂತಾಯಿತು ಎಂದು ಸಾಮಾನ್ಯ ಜನರು ಸಂತೋಷಪಡುತ್ತಾರೆ. ಈಗ ಅವರು ನಿಮ್ಮೊಂದಿಗೆ ಸಾಮಾನರಾಗಬಹುದು. ಬುದ್ಧಿವಂತರು, ಇಬ್ಬರೂ ಈಗಾಗಲೇ ಸಮಾನರಾಗಿರುವುದರಿಂದ, ತಮ್ಮ ಪಾದಗಳನ್ನು ಮುಟ್ಟುವ ಅಗತ್ಯವಿಲ್ಲ ಎಂದು ಹೇಳುತ್ತಾರೆ.
ಜೀವನ ಸಂಗಾತಿಯ ವಿಷಯದಲ್ಲಿ, ಪ್ರೀತಿ ಅದ್ಭುತವಾದುದು. ನಿಮ್ಮ ಸಂಗಾತಿಯ ಪಾದಗಳನ್ನು ನೀವು ಸ್ಪರ್ಶಿಸಿದರೆ, ನೀವು ಪ್ರೀತಿಯ ಪಾದಗಳನ್ನು ಸ್ಪರ್ಶಿಸುತ್ತಿದ್ದೀರಿ ಎಂದರ್ಥ. ತಕ್ಷಣ ನಿಮ್ಮ ಸಂಗಾತಿ ಅವರ ಅಹಂಕಾರವನ್ನು ಸಹ ಬಿಟ್ಟು ಬಿಡುತ್ತಾರೆ. ನೀವಿಬ್ಬರೂ ನಿಮ್ಮ ಅಹಂಕಾರವನ್ನು ಕೈಬಿಟ್ಟಂತೆ, ಪ್ರೀತಿ ಮಾತ್ರ ಮೇಲುಗೈ ಸಾಧಿಸುತ್ತದೆ. ಇದು ಸಂಬಂಧಗಳನ್ನು ಪೋಷಿಸುವ ಕಲೆ.
ಶುಭೋದಯ ... ಸಂಬಂಧಗಳನ್ನು ಪೋಷಿಸಿ ...💐
ವೆಂಕಟೇಶ್ - ಬೆಂಗಳೂರು
(9342209728)
ಯಶಸ್ವಿ ಭವ
Comentarios