10.5.2016
ಪ್ರಶ್ನೆ: ಸರ್... ಇಬ್ಬರು ವ್ಯಕ್ತಿಗಳು ಭೇಟಿಯಾದಾಗ, ಒಬ್ಬನು ತನ್ನಲ್ಲಿರುವ ಬುದ್ಧನನ್ನು ಅರಿತುಕೊಂಡಿದ್ದಾನೆ ಮತ್ತು ಇನ್ನೊಬ್ಬನು ಇನ್ನೂ ಅರಿತುಕೊಂಡಿಲ್ಲ. ಬುದ್ಧನನ್ನು ಅರಿತವನು ಇನ್ನೊಬ್ಬ ವ್ಯಕ್ತಿಯಲ್ಲಿಯೂ ಇರುವ ಬುದ್ಧನನ್ನು ಹೇಗೆ ಅನುಭವಿಸಲು ಸಾಧ್ಯವಾಗುತ್ತದೆ?
ಉತ್ತರ: ಎಲ್ಲದರ ಮೂಲವನ್ನು ಅರಿತುಕೊಂಡಿರುವವನೇ ಬುದ್ಧ. ಒಮ್ಮೆ ನೀವು ಮೂಲವನ್ನು ಅರಿತುಕೊಂಡರೆ, ನೀವೇ ಮೂಲವಾಗುತ್ತೀರಿ. ನೀವೇ ಮೂಲವಾಗಿರುವುದರಿಂದ, ನೀವು ಏನ್ನನೇ ನೋಡಿದರೂ, ಅದರಲ್ಲಿ ನಿಮ್ಮ ಉಪಸ್ಥಿತಿಯನ್ನು ನೀವು ಅನುಭವಿಸುವಿರಿ ಮತ್ತು ನೀವು ಯಾರನ್ನು ನೋಡಿದರೂ, ಅವರಲ್ಲಿ ನಿಮ್ಮನ್ನು ನೀವು ನೋಡುತ್ತೀರಿ. ಒಮ್ಮೆ ನೀವು ಬುದ್ಧತ್ವವನ್ನು ಪಡೆದ ನಂತರ, ಸಾಮಾನ್ಯ ಮನಸ್ಸುಗಳು ಏನು ಯೋಚಿಸುತ್ತವೆ ಎಂಬುದರ ಬಗ್ಗೆ ನಿಮಗೆ ತಿಳಿದಿರುತ್ತದೆ. ಏಕೆಂದರೆ ಬುದ್ಧತ್ವವು ಎಲ್ಲವನ್ನೂ ಒಳಗೊಂಡಿದೆ.
ನಿಮ್ಮ ದೇಹದಲ್ಲಿ ನೀವು ಇರುವಂತೆಯೇ, ನೀವು ಎಲ್ಲೆಡೆ ಇರುತ್ತೀರಿ. ನಿಮ್ಮ ದೇಹವು ಕಂಪಿಸುವಾಗ, ನೀವು ಎಲ್ಲೆಡೆ ಕಂಪಿಸುತ್ತೀರಿ. ನಿಮ್ಮ ದೇಹವು ಬಡಿತವನ್ನು ಅನುಭವಿಸಿದರೆ, ನೀವು ಎಲ್ಲೆಡೆ ಬಡಿತವನ್ನು ಅನುಭವಿಸುತ್ತೀರಿ. ಆದ್ದರಿಂದ ಎಲ್ಲರಲ್ಲೂ ಬುದ್ಧತ್ವವಿದೆ ಎಂದು ನಿಮಗೆ ತಿಳಿಯುತ್ತದೆ. ಅವರು ಅದನ್ನು ಯಾವುದೇ ಕ್ಷಣದಲ್ಲಿ ಅನುಭವಿಸಬಹುದು. ಬುದ್ಧ ಮತ್ತು ಸಂಭಾವ್ಯ ಬುದ್ಧನ ನಡುವಿನ ವ್ಯತ್ಯಾಸವೆಂದರೆ, ಬುದ್ಧನು ತನ್ನ ಸಾಮರ್ಥ್ಯದ ಬಗ್ಗೆ ತಿಳಿದಿರುತ್ತಾನೆ ಮತ್ತು ಸಂಭಾವ್ಯ ಬುದ್ಧನಿಗೆ ಅವನ ಸಾಮರ್ಥ್ಯದ ಬಗ್ಗೆ ತಿಳಿದಿರುವುದಿಲ್ಲ ಅಷ್ಟೇ.
ಶುಭೋದಯ ... ಇತರರಲ್ಲಿ ನಿಮ್ಮನ್ನು ನೋಡಿ...💐
ವೆಂಕಟೇಶ್ - ಬೆಂಗಳೂರು
(9342209728)
ಯಶಸ್ವಿ ಭವ
Comments