17.5.2015
ಪ್ರಶ್ನೆ: ಸರ್, ಈ ದೈವಿಕ ನಾಟಕದಲ್ಲಿ ನಮ್ಮ ಪಾತ್ರವೇನು?
ಉತ್ತರ: ದೈವಿಕ ನಾಟಕದಲ್ಲಿ, ಪ್ರತಿಯೊಂದು ಪಾತ್ರವೂ ವಿಶಿಷ್ಟವಾಗಿದೆ ಮತ್ತು ಹೋಲಿಸಲಾಗದಷ್ಟು ಮಹತ್ವದ್ದಾಗಿದೆ. ಆದ್ದರಿಂದ ಯಾರಿಗೂ ಯಾರೂ ಸ್ಪರ್ಧಿಗಳಲ್ಲ. ಸ್ಪರ್ಧೆಯಿಲ್ಲದಿದ್ದಾಗ, ಗೆಲ್ಲುವ ಉದ್ದೇಶವಿರುವುದಿಲ್ಲ. ಗೆಲ್ಲುವ ಬಗ್ಗೆ ನೀವು ಚಿಂತೆ ಮಾಡದಿದ್ದಾಗ, ನೀವು ಏನು ಮಾಡಿದರೂ ಅದು ವಿನೋದಮಯವಾಗುತ್ತದೆ.
ಕೇವಲ ಮೋಜಿಗಾಗಿ ಆಟವಾಡಿ ... ಗೆಲ್ಲುವುದಕ್ಕಾಗಿ ಅಲ್ಲ ...
ನೀವು ಯಾವುದೇ ಪಾತ್ರವನ್ನು ಪಡೆದರೂ, ಅದನ್ನು ನಿಮ್ಮ ತೃಪ್ತಿಗೆ ತಕ್ಕಂತೆ ನಿರ್ವಹಿಸಿ. ನಿಮಗೆ ನೀವೇ ಅಭಿಮಾನಿಯಾಗಿರಿ. ಪ್ರತಿಯೊಬ್ಬರ ಪಾತ್ರವು ವಿಶಿಷ್ಟವಾದ ಕಾರಣ, ಯಾರೂ ಯಾರಿಗೂ ಆದರ್ಶಪ್ರಾಯರಾಗಲು ಸಾಧ್ಯವಿಲ್ಲ. ಜೀವನದಲ್ಲಿ ಒಬ್ಬ ಆದರ್ಶಪಾತ್ರರನ್ನು ನೀವು ಹೊಂದಿದ್ದರೆ, ಇದರರ್ಥ ನಿಮ್ಮ ಪಾತ್ರವನ್ನು ನೀವು ಕಳೆದುಕೊಳ್ಳುತ್ತೀರಿ ಎಂದು. ಆಗ ನೀವು ಎಂದಿಗೂ ತೃಪ್ತರಾಗುವುದಿಲ್ಲ. ನೀವು ಈಗ ಯಾವ ಪಾತ್ರವನ್ನು ನಿರ್ವಹಿಸುತ್ತಿದ್ದೀರೋ, ಯಾರೂ ಇದನ್ನು ಮೊದಲು ನಿರ್ವಹಿಸಿಲ್ಲ, ಮತ್ತು ಮುಂದೆ ಯಾರೂ ನಿರ್ವಹಿಸುವುದೂ ಇಲ್ಲ. ಅಂತಹ ಪ್ರಮುಖ ಪಾತ್ರ ನಿಮ್ಮದಾಗಿದೆ. ಅದುವೇ ದೈವಿಕ ನಾಟಕದ ಸೌಂದರ್ಯ.
ಶುಭೋದಯ .... ನಿಮ್ಮ ಪಾತ್ರವನ್ನು ಆನಂದಿಸಿ ...💐
ವೆಂಕಟೇಶ್ - ಬೆಂಗಳೂರು
(9342209728)
ಯಶಸ್ವಿ ಭವ
コメント