4.7.2015
ಪ್ರಶ್ನೆ: ಸರ್, ಜನರು ಯಾವಾಗ ತೃಪ್ತರಾಗುತ್ತಾರೆ?
ಉತ್ತರ: ನಿಮ್ಮ ಸಂಪೂರ್ಣತೆಯನ್ನು ನೀವು ಅರಿತುಕೊಂಡಾಗ ಮಾತ್ರ ನೀವು ತೃಪ್ತರಾಗುತ್ತೀರಿ. ಅದಕ್ಕೂ ಮೊದಲು ನೀವು ತೃಪ್ತರಾಗಲು ಸಾಧ್ಯವಿಲ್ಲ. ಸಂಪೂರ್ಣತೆಯ ಹಂಬಲ ಎಲ್ಲರಲ್ಲೂ ಇದೆ. ಅದಕ್ಕಾಗಿಯೇ ಎಲ್ಲರೂ ಹೆಚ್ಚು ಸಂಪತ್ತು, ಹೆಚ್ಚಿನ ಶಕ್ತಿ ಮತ್ತು ಖ್ಯಾತಿಯನ್ನು ಗಳಿಸಲು ಶ್ರಮಿಸುತ್ತಾರೆ. ಆದರೆ ಒಬ್ಬರು ಎಲ್ಲವನ್ನೂ ಬಾಹ್ಯವಾಗಿ ಗಳಿಸಲು ಸಾಧ್ಯವಿಲ್ಲ. ಎಲ್ಲವನ್ನೂ ಪರಿಪೂರ್ಣವಾಗಿ ಗಳಿಸುವ ಏಕೈಕ ಮಾರ್ಗವೆಂದರೆ ಒಳಮುಖವಾಗಿ ಹೋಗುವುದು.
ನೀವು ನಿಮ್ಮ ಮೂಲವನ್ನು ಅರಿತುಕೊಂಡಾಗ, ಆ ನಿಮ್ಮ ಮೂಲ ಎಲ್ಲವುದರ ಮೂಲ ಎಂದು ನೀವು ತಿಳಿಯುವಿರಿ. ನೀವೇ ಎಲ್ಲವೂ ಎಂದು ನೀವು ತಿಳಿದುಕೊಂಡಾಗ, ಅದು ಅಂತಿಮ ಸಾಕ್ಷಾತ್ಕಾರ ಮತ್ತು ಅಂತಿಮ ತೃಪ್ತಿ. ಈ ಸಾಕ್ಷಾತ್ಕಾರಕ್ಕೆ ನೀವು ಒಂದು ಹೆಜ್ಜೆ ಹಿಂದೆ ಉಳಿದರೂ ಸಹ ನೀವು ಸಂಪೂರ್ಣವಾಗಿ ತೃಪ್ತರಾಗುವುದಿಲ್ಲ. ಯಾವುದನ್ನು ಗಳಿಸುವ ಮೂಲಕ, ಎಲ್ಲವುದನ್ನೂ ಗಳಿಸಿದಂತಾಗುತ್ತದೆಯೋ, ಅದುವೇ ಸ್ವಯಂ.
ಶುಭೋದಯ ... ನಿಮ್ಮ ಸ್ವಯಂ ಅನ್ನು ಗಳಿಸಿ ...💐
ವೆಂಕಟೇಶ್ - ಬೆಂಗಳೂರು
(9342209728)
ಯಶಸ್ವಿ ಭವ
Comments