15.5.2015
ಪ್ರಶ್ನೆ: ಜೀವಾತ್ಮ ಮತ್ತು ಪರಮಾತ್ಮದ ಬಗ್ಗೆ ದಯವಿಟ್ಟು ವಿವರಿಸಿ.
ಉತ್ತರ: ಅರಿವೇ ಆತ್ಮ. ಅದು ದೇಹ, ಮನಸ್ಸು ಮತ್ತು ಕರ್ಮ ದಾಖಲೆಯೊಂದಿಗೆ ತನ್ನನ್ನು ಗುರುತಿಸಿಕೊಂಡಾಗ ಅದನ್ನು ಜೀವಾತ್ಮ ಅಥವಾ ಅಪೂರ್ಣ ಅರಿವು ಎಂದು ಕರೆಯಲಾಗುತ್ತದೆ. ಅರಿವು ತನ್ನನ್ನು ತಾನು ಯಾವುದರ ಜೊತೆಯೂ ಗುರುತಿಸಿಕೊಳ್ಳದೆ, ಎಲ್ಲವನ್ನೂ ಕಾರ್ಯರೂಪಕ್ಕೆ ತರುವಾಗ, ಅದನ್ನು ಪರಮಾತ್ಮ ಅಥವಾ ಸಂಪೂರ್ಣ ಅರಿವು ಎಂದು ಕರೆಯಲಾಗುತ್ತದೆ.
ಅರಿವು ಕಡಿಮೆಯಾದಾಗ, ಗುರುತಿಸಿಕೊಳ್ಳುವಿಕೆ ಹೆಚ್ಚಾಗುತ್ತದೆ. ಅರಿವು ಹೆಚ್ಚಾದಾಗ ಗುರುತಿಸಿಕೊಳ್ಳುವಿಕೆ ಕಡಿಮೆಯಾಗುತ್ತದೆ. ಗುರುತಿಸಿಕೊಳ್ಳುವಿಕೆ ಇರುವವರೆಗೆ, ಜೀವಾತ್ಮ ಮತ್ತು ಪರಮಾತ್ಮ ಎಂಬ ಪರಿಕಲ್ಪನೆಯು ಇರುತ್ತದೆ. ಯಾವುದೇ ಗುರುತಿಸಿಕೊಳ್ಳುವಿಕೆ ಇಲ್ಲದಿದ್ದಾಗ, ಶುದ್ಧ ಅರಿವು ಮಾತ್ರ ಇರುತ್ತದೆ. ಕೆಲವರು ಇದನ್ನು ಆತ್ಮ ಎಂದು ಕರೆಯುತ್ತಾರೆ. ಕೆಲವರು ಇದನ್ನು ಅನಾತ್ಮ (ಆತ್ಮವಿಲ್ಲದ್ದು) ಎಂದು ಕರೆಯುತ್ತಾರೆ. ಇದನ್ನು ಆತ್ಮ ಅಥವಾ ಅನಾತ್ಮ ಎಂದು ಕರೆಯುವ ಅಗತ್ಯವಿಲ್ಲ. ಕೇವಲ ಜಾಗರೂಕರಾಗಿರಿ.
ಶುಭರಾತ್ರಿ .. ಕೇವಲ ಜಾಗರೂಕರಾಗಿರಿ ..💐
ವೆಂಕಟೇಶ್ - ಬೆಂಗಳೂರು
(9342209728)
ಯಶಸ್ವಿ ಭವ
Σχόλια