3.4.2016
ಪ್ರಶ್ನೆ: ಸರ್, ಪ್ರಬುದ್ಧ ಜ್ಞಾನಿಗಳು ತಮ್ಮ ಅನುಭವಗಳನ್ನು ಏಕೆ ಚರ್ಚಿಸುವುದಿಲ್ಲ?
ಉತ್ತರ: ಅನುಭವಗಳು ಮನಸ್ಸಿಗೆ ಸಂಬಂಧಿಸಿವೆ. ಜ್ಞಾನೋದಯವು ಪ್ರಜ್ಞೆಗೆ ಸಂಬಂಧಿಸಿದೆ. ವಿರಳವಾಗಿ ಕೆಲವೇ ಕೆಲವು ಪ್ರಬುದ್ಧ ಸಂತರು ತಮ್ಮ ಅನುಭವಗಳನ್ನು ವಿವರಿಸಿದ್ದಾರೆ. ಆದಾಗ್ಯೂ, ಹೆಚ್ಚಿನವರು ತಮ್ಮ ಅನುಭವಗಳನ್ನು ವಿವರಿಸಿಲ್ಲ. ನಿಮ್ಮ ಅನುಭವಗಳ ಬಗ್ಗೆ ನೀವು ಇತರರಿಗೆ ಹೇಳಿದರೆ, ನೀವು ಉನ್ನತವಾದವರು ಮತ್ತು ಇತರರು ಕೆಳಮಟ್ಟದವರು ಎಂದು ನೀವು ಭಾವಿಸಬಹುದು. ಅಲ್ಲದೆ, ನಿಮ್ಮ ಅನುಭವ ಮತ್ತು ಇತರರ ಅನುಭವವು ಒಂದೇ ಆಗಿರಬೇಕಾಗಿಲ್ಲ. ಆದ್ದರಿಂದ, ನಿಮ್ಮ ಅನುಭವಗಳನ್ನು ಹೇಳುವಲ್ಲಿ ಯಾವುದೇ ಅರ್ಥವಿಲ್ಲ.
ಇತರರು ಆಧ್ಯಾತ್ಮಿಕವಾಗಿ ಸುಧಾರಿಸಿದ್ದರೂ, ನೀವು ಸಾಧಿಸಿದ್ದನ್ನು ಅವರು ಇನ್ನೂ ಅನುಭವಿಸದ ಕಾರಣ ಅವರು ಇನ್ನೂ ಆಧ್ಯಾತ್ಮಿಕವಾಗಿ ಸುಧಾರಿಸಿಲ್ಲ ಎಂದು ಊಹಿಸಬಹುದು. ಇದರಿಂದ ನೀವೇ ಅವರನ್ನು ದಾರಿ ತಪ್ಪಿಸಿದಂತೆ ಆಗುತ್ತದೆ. ನೀವು ಜ್ಞಾನೋದಯದ ಸ್ಥಿತಿಯನ್ನು ಸಾಧಿಸಿದಾಗ, ಎಲ್ಲಾ ಅನುಭವಗಳು ಬರೀ ಭ್ರಮೆ ಹೊರತುಪಡಿಸಿ ಏನೂ ಅಲ್ಲ ಎಂದು ನೀವು ಕಲಿಯುವಿರಿ. ಆದ್ದರಿಂದ, ನಿಮ್ಮ ಅನುಭವವನ್ನು ನೀವು ಚರ್ಚಿಸುವುದಿಲ್ಲ. ಪ್ರತಿಯೊಬ್ಬರಿಗೂ ಕೆಲವು ಸಾಮಾನ್ಯ ಮತ್ತು ವೈಜ್ಞಾನಿಕ ಅನುಭವಗಳಾಗುತ್ತವೆ. ಅಗತ್ಯವಿದ್ದರೆ, ನೀವು ಅವುಗಳನ್ನು ಹಂಚಿಕೊಳ್ಳಬಹುದು.
ಮಹಾನ್ ಸಂತರು ತಮ್ಮನ್ನು ತಾವು ವ್ಯಕ್ತಪಡಿಸಲು ಪ್ರಯತ್ನಿಸುವುದಿಲ್ಲ. ಬದಲಾಗಿ, ಅವರು ತಮ್ಮ ಶಿಷ್ಯರನ್ನು ತಾವು ಪಡೆದ ಬುದ್ಧಿವಂತಿಕೆಗೆಯ ಕಡೆ ಕರೆದೊಯ್ಯುತ್ತಾರೆ.
ಶುಭೋದಯ ... ಅನುಭವಗಳನ್ನು ಮೀರಿ ಹೋಗಿ ..💐
ವೆಂಕಟೇಶ್ - ಬೆಂಗಳೂರು
(9342209728)
留言