13.6.2015
ಪ್ರಶ್ನೆ: ಸರ್, ನಾನು ಕೋಪದಿಂದ ಮುಕ್ತವಾಗುವವರೆಗೆ ನನ್ನ ಕುಟುಂಬದಲ್ಲಿ ಸಾಮರಸ್ಯವನ್ನು ಹೇಗೆ ಸೃಷ್ಟಿಸುವುದು?
ಉತ್ತರ: ಕುಟುಂಬದಲ್ಲಿ ಸಾಮರಸ್ಯವನ್ನು ಸ್ಥಾಪಿಸುವಲ್ಲಿ ಕೋಪವು ಒಂದು ದೊಡ್ಡ ಸಮಸ್ಯೆಯಲ್ಲ. ಕೋಪವು ಸಮಸ್ಯೆಯಾಗಿದ್ದರೆ, ಯಾವುದೇ ಕುಟುಂಬದಲ್ಲಿ ಸಾಮರಸ್ಯವನ್ನು ಹೊಂದಲು ಸಾಧ್ಯವಿರುತ್ತಿರಲಿಲ್ಲ. ಒಬ್ಬ ವ್ಯಕ್ತಿಯು ನಿಮ್ಮ ಮೇಲೆ ಕೋಪಗೊಂಡಾಗ, ಅದಕ್ಕೆ ಪ್ರತಿಯಾಗಿ ನೀವು ಕೋಪಗೊಳ್ಳದಿದ್ದರೆ, ನಿಮಗೆ ತೊಂದರೆಯಾಗುವುದಿಲ್ಲ.
ನಿಮಗೆ ಕೋಪ ಬಂದರೆ, ಇತರ ವ್ಯಕ್ತಿಯನ್ನು ಖಂಡಿಸುವ ಹಕ್ಕು ನಿಮಗೆ ಇಲ್ಲ. ವಾಸ್ತವವಾಗಿ, ಪ್ರತಿಯೊಬ್ಬರೂ ಒಂದಲ್ಲ ಒಂದು ಸಮಯದಲ್ಲಿ ಕೋಪಗೊಳ್ಳುತ್ತಾರೆ. ಕೋಪವು ಸುಪ್ತಾವಸ್ಥೆಯ / ಅನೈಚ್ಛಿಕ ಕ್ರಿಯೆ ಎಂದು ಎಲ್ಲರಿಗೂ ತಿಳಿದಿದೆ. ಆದ್ದರಿಂದ ಕೋಪವು ಒಂದು ಸಮಸ್ಯೆಯಲ್ಲ. ಹಾಗಾದರೆ ಸಮಸ್ಯೆ ಏನು?
ನೀವು ಜಾಗೃತಗೊಂಡ ನಂತರ ನಿಮ್ಮ ಸುಪ್ತಾವಸ್ಥೆಯ ಕೃತ್ಯಕ್ಕೆ ಕ್ಷಮೆಯಾಚಿಸುತ್ತೀರೋ ಇಲ್ಲವೋ ಎಂಬುದು ಸಮಸ್ಯೆ. ನೀವು ಇತರ ವ್ಯಕ್ತಿಯನ್ನು ಸಾಂತ್ವನಗೊಳಿಸಲು ಪ್ರಯತ್ನಿಸುತ್ತಿದ್ದೀರೋ ಇಲ್ಲವೋ ಎಂಬುದು ಸಮಸ್ಯೆ. ನೀವು ಇತರರಿಗೆ ಪ್ರೀತಿಯನ್ನು ವ್ಯಕ್ತಪಡಿಸುತ್ತೀರೋ ಇಲ್ಲವೋ ಎಂಬುದು ಸಮಸ್ಯೆ.
ನಿಮ್ಮ ಕೋಪದಿಂದ ಇತರ ವ್ಯಕ್ತಿಗೆ ನೋವಾಗಿದ್ದರೆ, ಅದಕ್ಕಾಗಿ ನೀವು ಅವರಿಗೆ ಔಷಧಿ ನೀಡಬೇಕು. ಆ ಔಷಧಿಯೇ ಪ್ರೀತಿ. ಕೇವಲ ಒಂದು ಅಪ್ಪುಗೆಯು ನೋವನ್ನು ಗುಣಪಡಿಸುತ್ತದೆ. ಕೋಪಕ್ಕೆ ಯಾರು ಕಾರಣ ಮತ್ತು ಇದು ಯಾರ ತಪ್ಪು ಎಂದು ಕಂಡುಹಿಡಿಯಲು ಪ್ರಯತ್ನಿಸಬೇಡಿ. ಏಕೆಂದರೆ ಅದು ನಿಮ್ಮ ಅಹಂಕಾರವನ್ನು ಬಲಪಡಿಸುತ್ತದೆ ಮತ್ತು ಅಂತರವನ್ನು ಹೆಚ್ಚಿಸುತ್ತದೆ.
ಬದಲಾಗಿ, ಇತರರೊಂದಿಗೆ ರಾಜಿ ಮಾಡಿಕೊಳ್ಳಲು ಪ್ರಯತ್ನಿಸಿ. ಯಾರು ಮೊದಲು ರಾಜಿ ಮಾಡಿಕೊಳ್ಳಬೇಕು ಎಂಬ ಸ್ಪರ್ಧೆ ಏರ್ಪಡುವಂತಾಗಲಿ. ನೀವು ಕೋಪಗೊಂಡು, ನಿಮ್ಮ ಸಂಗಾತಿಯನ್ನು ನೋಯಿಸಿದರೆ, ನಿಮ್ಮ ಸಂಗಾತಿಯೊಂದಿಗೆ ರಾಜಿ ಮಾಡಿಕೊಳ್ಳಲು, ನಿಮ್ಮ ಔಚಿತ್ಯಪ್ರಜ್ಞೆಯನ್ನು ಬಳಸಿ. ನಿಮ್ಮ ಸಂಗಾತಿಯೊಂದಿಗೆ ರಾಜಿ ಮಾಡಿಕೊಳ್ಳಲು, ನೀವು ಅವರ ಪಾದಗಳನ್ನು ಮುಟ್ಟಿದರೂ ಏನೂ ತಪ್ಪಿಲ್ಲ ಎಂದು ನಾನು ಭಾವಿಸುತ್ತೇನೆ.
ಶುಭೋದಯ... ಸಾಮರಸ್ಯದ ಕುಟುಂಬವನ್ನು ಹೊಂದಿ...💐
ವೆಂಕಟೇಶ್ - ಬೆಂಗಳೂರು
(9342209728)
ಯಶಸ್ವಿ ಭವ
Comments