27.3.2016
ಪ್ರಶ್ನೆ: ಸರ್, ನಾವು ಕೆಲವೊಂದು ಪರಿಸ್ಥಿತಿಯನ್ನು ಕಂಡು, ಇದು ನಮ್ಮ ಬಾಲ್ಯದಿಂದಲೂ ಕಂಡ ಕನಸುಗಳನ್ನು ಈಡೇರಿಸುವ ಅವಕಾಶಗಳೆಂದು ಭಾವಿಸುತ್ತೇವೆ. ಆದರೆ ಅದು ಹಾಗಲ್ಲ, ಇಂತಹ ಸಮಯದಲ್ಲಿ ನಾವು ಕುರುಡರಾಗಿರುತ್ತೇವೆ. ಆದ್ದರಿಂದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು ಹೇಗೆ ಮತ್ತು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಹೇಗೆ?
ಉತ್ತರ: ನಿಮಗೆ ಒಂದು ಉದ್ದೇಶ / ಕಲ್ಪನೆ ಇದ್ದರೆ, ಅದು ನಿಮ್ಮ ಉಪಪ್ರಜ್ಞಾ ಮನಸ್ಸಿನ ಸ್ಥಿತಿಗೆ ಹೋಗಿ ಪ್ರತಿಫಲಿಸುತ್ತದೆ, ಹೀಗಾಗಿ ನಿಮ್ಮ ಉದ್ದೇಶ ಬಲಗೊಳ್ಳುತ್ತದೆ. ನಿಮ್ಮ ಉಪಪ್ರಜ್ಞಾ ಮನಸ್ಸು ಇತರರ ಉಪಪ್ರಜ್ಞಾ ಮನಸ್ಸಿನ ಜೊತೆ ಸಂಬಂಧ ಹೊಂದಿರುತ್ತದೆ. ಆದ್ದರಿಂದ, ನಿಮ್ಮ ಪ್ರತಿಬಿಂಬಗಳು ಇತರರ ಉಪಪ್ರಜ್ಞಾ ಮನಸ್ಸನ್ನು ತಲುಪುತ್ತವೆ. ನಿಮ್ಮ ದೃಷ್ಟಿ ಸ್ಪಷ್ಟವಾಗುತ್ತಾ ಹೋದಂತೆ, ನಿಮ್ಮ ಉದ್ದೇಶವು ಆಳವಾಗಿ ಮತ್ತು ಆಳವಾಗಿ ಅತಿಪ್ರಜ್ಞಾ ಮನಸ್ಸಿನವರೆಗೆ ಹೋಗುತ್ತದೆ. ಅತಿಪ್ರಜ್ಞಾ ಮನಸ್ಸು, ನಿಮ್ಮ ಉದ್ದೇಶವನ್ನು ಪೂರೈಸುವ ಜನರೊಂದಿಗೆ ನಿಮ್ಮನ್ನು ಸಂಪರ್ಕಿಸುತ್ತದೆ. ಇದನ್ನು ಅವಕಾಶ ಎಂದು ಕರೆಯಲಾಗುತ್ತದೆ.
ಅವಕಾಶ ಬಂದಾಗ, ಅದನ್ನು ಗುರುತಿಸಿ ಬಳಸಿಕೊಳ್ಳಲು, ನೀವು ಎಚ್ಚರವಾಗಿರಬೇಕು.. ಕುತೂಹಲದಿಂದ, ನೀವು ಒಂದು ಪರಿಸ್ಥಿತಿಯನ್ನು ತಪ್ಪಾಗಿ ಲೆಕ್ಕಾಚಾರ ಮಾಡಿರಬಹುದು. ಆದರೆ, ಪರಿಸ್ಥಿತಿ ಹಾಗೆ ಇಲ್ಲದೆಯೂ ಇರಬಹುದು. ಅದೇನೇ ಇದ್ದರೂ, ನಿಮ್ಮ ಉದ್ದೇಶಕ್ಕೆ ತಕ್ಕದಾಗಿ ನೀವು ಯಾವುದಾದರೂ ಪ್ರಯತ್ನವನ್ನು ಮಾಡುತ್ತಿರಬೇಕು. ಇದು ಮಾದರಿ ಪರೀಕ್ಷೆಯನ್ನು ಅಂತಿಮ ಪರೀಕ್ಷೆ ಎಂದು ತಪ್ಪುಗ್ರಹಿಕೆಯಂತೆ. ಅಂತಿಮ ಪರೀಕ್ಷೆಯನ್ನು ಎದುರಿಸಲು ಮಾದರಿ ಪರೀಕ್ಷೆ ನಿಮಗೆ ಸಹಾಯ ಮಾಡುತ್ತದೆ. ಮಾದರಿ ಪರೀಕ್ಷೆಯಿಂದ ನೀವು ಏನನ್ನಾದರೂ ಕಲಿಯುವಿರಿ. ಪ್ರತಿಯೊಂದು ಸನ್ನಿವೇಶದಿಂದಲೂ ನಿಮ್ಮ ಉದ್ದೇಶವನ್ನು ಪೂರೈಸಲು ಪ್ರಕೃತಿ ನಿಮ್ಮನ್ನು ಸಿದ್ಧಪಡಿಸುತ್ತದೆ. ಆದ್ದರಿಂದ, ಯಾವುದೂ ವ್ಯರ್ಥವಾಗುವುದಿಲ್ಲ.
ಶುಭೋದಯ ... ಅವಕಾಶವನ್ನು ಗುರುತಿಸಲು ಜಾಗೃತಿ ಮೂಡಿಸಿ ..💐
ವೆಂಕಟೇಶ್ - ಬೆಂಗಳೂರು
(9342209728)
Comments