30.5.2015
ಪ್ರಶ್ನೆ: ಸರ್, ಎಲ್ಲವೂ ಸರಿಯಾಗಿದ್ದರೆ, ನಾನು ಯಾಕೆ ಪ್ರಯತ್ನಿಸಬೇಕು?
ಉತ್ತರ: ಇದರರ್ಥ ನೀವು ಪ್ರಯತ್ನ ಮಾಡಬಾರದು ಎಂದಲ್ಲ. ಪ್ರಯತ್ನಿಸದೆ ನೀವು ಸುಮ್ಮನಿರಲು ಸಾಧ್ಯವಿಲ್ಲ. ನೀವು ಪ್ರಯತ್ನ ಮಾಡಬೇಕು. ನಿರೀಕ್ಷಿತ ಫಲಿತಾಂಶವು ನಿರೀಕ್ಷಿತ ಸಮಯದಲ್ಲಿ ಬರದಿದ್ದರೆ, ನೀವು ಖಿನ್ನತೆಗೆ ಒಳಗಾಗಬಾರದು.
ನೀವು ನಿರೀಕ್ಷಿಸುತ್ತಿರುವ ಫಲಿತಾಂಶ ಈಗಿಂದೀಗಲೇ ಬಂದರೆ, ಅದನ್ನು ನಿಭಾಯಿಸಲು ನಿಮಗೆ ಸಾಧ್ಯವಾಗದಿರಬಹುದು. ಆದ್ದರಿಂದ ಫಲಿತಾಂಶಗಳು ಮುಂದೂಡಿರಬಹುದು. ನಿಮ್ಮ ಪ್ರಯತ್ನಗಳನ್ನು ನೀವು ಮುಂದುವರಿಸಬೇಕು. ಈಗ ಬಂದ ಫಲಿತಾಂಶವು ಒಳ್ಳೆಯದಕ್ಕಾಗಿಯೇ. ನಿಮ್ಮ ಗುರಿಯನ್ನು ತಲುಪಲು ಇದು ನಿಮಗೆ ಕೆಲವು ಅಮೂಲ್ಯವಾದ ಪಾಠಗಳನ್ನು ಕಲಿಸುತ್ತದೆ.
ನಿಮ್ಮ ಜೀವನದಲ್ಲಿ ಏನೆಲ್ಲಾ ಆಗುತ್ತದೋ ಅದು ನಿಮ್ಮ ಮುಖ್ಯ ಗುರಿಯನ್ನು ಸಾಧಿಸಲು ನಿಮ್ಮನ್ನು ಸಿದ್ಧಗೊಳಿಸುತ್ತದೆ. ಇದು ನಿಮಗೆ ಹೇಗೆ ಸಹಾಯ ಮಾಡುತ್ತದೆ ಎಂದು ಈಗ ನಿಮಗೆ ತಿಳಿದಿಲ್ಲದಿರಬಹುದು. ಆದರೆ ಭವಿಷ್ಯದಲ್ಲಿ ನಿಮಗೆ ತಿಳಿಯುತ್ತದೆ. ಅದಕ್ಕಾಗಿಯೇ ‘ಎಲ್ಲವೂ ಸರಿಯಾಗಿದೆ’ ಎಂದು ಹೇಳಿದ್ದಾರೆ.
‘ಎಲ್ಲವೂ ಸರಿಯಾಗಿದೆ’, ಇದರರ್ಥ ಪ್ರಯತ್ನವನ್ನು ಮಾಡುವುದು ಮತ್ತು ಫಲಿತಾಂಶದ ಬಗ್ಗೆ ಚಿಂತಿಸದೇ ಇರುವುದು. ಏಕೆಂದರೆ ಅದು ನಿಮ್ಮ ಕೈಯಲಿಲ್ಲ. ಸರಿಯಾದ ಫಲಿತಾಂಶ ಸರಿಯಾದ ಸಮಯದಲ್ಲಿ ಬರುತ್ತದೆ.
ಶುಭೋದಯ ... ಪ್ರಯತ್ನಿಸುತ್ತಿರಿ ...💐
ವೆಂಕಟೇಶ್ - ಬೆಂಗಳೂರು
(9342209728)
ಯಶಸ್ವಿ ಭವ
Коментарі