25.4.2016
ಪ್ರಶ್ನೆ: ಸರ್, ಆಸ್ತಮಾವನ್ನು ಗುಣಪಡಿಸುವ ಯಾವುದಾದರೂ ದೃಢಪಡಿಸಿದ ಶಾಶ್ವತ ಪರಿಹಾರವಿದೆಯೇ?
ಉತ್ತರ: ಆಸ್ತಮಾ ವಾಯುಮಾರ್ಗದ ಉರಿಯೂತದ ಕಾಯಿಲೆಯಾಗಿದೆ. ಇದು ಮುಖ್ಯವಾಗಿ ಅಲರ್ಜಿಯಿಂದ ಬರುತ್ತದೆ. ಆಸ್ತಮಾದ ಕೆಲವು ಸಾಮಾನ್ಯ ಗುಣಲಕ್ಷಣಗಳೆಂದರೆ ಮರುಕಳಿಸುವ ಉಸಿರಾಟದ ತೊಂದರೆಗಳು, ಉಸಿರುಗಟ್ಟುವಿಕೆ, ಉಬ್ಬಸ, ಎದೆ ಬಿಗಿತ, ಕೆಮ್ಮು ಇತ್ಯಾದಿ. ವಾತಾವರಣದಲ್ಲಿನ ಅಲರ್ಜಿ ಕಾರಕಗಳಾದ ಮನೆ ಧೂಳಿನ ಹುಳಗಳು, ಜಿರಳೆ, ಹುಲ್ಲು, ಪರಾಗ, ಆಹಾರ, ಹವಾಮಾನ ಬದಲಾವಣೆಗಳು ಮತ್ತು ಬೆಕ್ಕು-ನಾಯಿಗಳಂತಹ ಪ್ರಾಣಿಗಳು ಇತ್ಯಾದಿ ಆಸ್ತಮಾದ ಕೆಲವು ಸಾಮಾನ್ಯ ಕಾರಣಗಳಾಗಿವೆ.
ಆಯುರ್ವೇದವು ಆಸ್ತಮಾದ ಕಾರಣಗಳನ್ನು ಮೂರು ಅಂಶಗಳಾಗಿ ವರ್ಗೀಕರಿಸುತ್ತದೆ - ಆಹಾರ ಸಂಬಂಧಿತ ಅಂಶಗಳು, ಕೆಲಸಕ್ಕೆ ಸಂಬಂಧಿತ ಅಂಶಗಳು ಮತ್ತು ಇತರ ಅಂಶಗಳು. ನಾವು ಇದನ್ನು ಆಧ್ಯಾತ್ಮಿಕವಾಗಿ ವಿಶ್ಲೇಷಿಸಿದರೆ, ಆಸ್ತಮಾಗೆ ಎರಡು ಕಾರಣಗಳಿರಬೇಕು. ಒಂದು ಆನುವಂಶಿಕತೆ, ಇನ್ನೊಂದು ಪ್ರಸ್ತುತ ಜೀವನ ಶೈಲಿ. ಸೂಕ್ಷ್ಮತೆಯಿಂದ ಕೂಡ ಅಲರ್ಜಿ ಉಂಟಾಗುತ್ತವೆ. ಸೂಕ್ಷ್ಮತೆಯು ಮನಸ್ಸಿಗೆ ಸಂಬಂಧಿಸಿದ್ದು. ಮನಸ್ಸು ಆನುವಂಶಿಕ ಗುರುತುಗಳಿಂದ ಪ್ರಭಾವಿತವಾಗಿರುತ್ತದೆ.
ಆದ್ದರಿಂದ, ನಿಮ್ಮ ಆನುವಂಶಿಕ ಗುರುತುಗಳನ್ನು ನೀವು ಬದಲಾಯಿಸಬಹುದಾದರೆ, ನೀವು ಆಸ್ತಮಾವನ್ನು ಗುಣಪಡಿಸಿಕೊಳ್ಳಬಹುದು. ಕಾರ್ಯ ಸಿದ್ಧಿ ಯೋಗದ ಧ್ಯಾನ ವಿಧಾನಗಳು ನಿಮ್ಮ ವಂಶವಾಹಿಗಳನ್ನು ಬದಲಾಯಿಸುತ್ತವೆ. ಸೂಕ್ತವಾದ ವ್ಯಾಯಾಮ, ಆಸನಗಳು, ಪ್ರಾಣಾಯಾಮಗಳು, ಮುದ್ರೆಗಳು ಮತ್ತು ಕ್ರಿಯೆಗಳು ನಿಮ್ಮ ದೇಹವನ್ನು ಶುದ್ಧೀಕರಿಸುತ್ತವೆ ಮತ್ತು ಅಂಗಾಂಗಗಳಿಗೆ ಶಕ್ತಿ ತುಂಬುತ್ತವೆ. ಆದರೆ ಶಾಶ್ವತ ಪರಿಹಾರವು ನಿಮ್ಮ ಜೀವನಶೈಲಿಯನ್ನು ಅವಲಂಬಿಸಿರುತ್ತದೆ. ನಿಮ್ಮ ಜೀವನಶೈಲಿಯನ್ನು ಆಸ್ತಮಾಕ್ಕೆ ಕಾರಣವಾಗದ ರೀತಿಯಲ್ಲಿ ಬದಲಾಯಿಸಿಕೊಂಡರೆ, ನೀವು ಆಸ್ತಮಾ ಇಲ್ಲದ ಜೀವನವನ್ನು ನಡೆಸಬಹುದು.
ಶುಭೋದಯ ... ನಿಮ್ಮ ಧ್ಯಾನವು ನಿಮ್ಮ ವಂಶವಾಹಿಗಳನ್ನು ಬದಲಾಯಿಸಲಿ ...💐
ವೆಂಕಟೇಶ್ - ಬೆಂಗಳೂರು
(9342209728)
ಯಶಸ್ವಿ ಭವ
Comments