6.4.2016
ಪ್ರಶ್ನೆ: ನಾವು ನಿರಂತರವಾಗಿ ಧ್ಯಾನ ಮಾಡುವಾಗ, ಒಂದು ನಿರ್ದಿಷ್ಟ ಅವಧಿಯ ನಂತರ ನಮ್ಮ ಆಲೋಚನೆಗಳೊಂದಿಗೆ ನಮಗೆ ಯಾವುದೇ ಸಂಬಂಧವಿರುವುದಿಲ್ಲ, ಎಂಬುದು ಒಬ್ಬ ವ್ಯಕ್ತಿಯ ವಾದ. ನಾವು ಮತ್ತು ನಮ್ಮ ಆಲೋಚನೆಗಳು ಪ್ರತ್ಯೇಕವಾಗಿವೆ, ಆದ್ದರಿಂದ ಅವುಗಳಲ್ಲಿ ನಮಗೆ ಬೇಕಾದುದನ್ನು ನಾವು ಆರಿಸಿಕೊಳ್ಳಬಹುದು, ಎಂದು ಹೇಳುತ್ತಾರೆ. ದಯವಿಟ್ಟು ಇದನ್ನು ಸ್ಪಷ್ಟಪಡಿಸಿ.
ಉತ್ತರ: ಹೌದು. ಆ ವ್ಯಕ್ತಿ ಹೇಳಿರುವುದು ಸರಿ. ಪ್ರತಿಯೊಬ್ಬರಲ್ಲೂ ಎರಡು ಕಾರ್ಯಗಳು ನಡೆಯುತ್ತಿರುತ್ತವೆ. ಒಂದು ಸ್ವಯಂಪ್ರೇರಿತ (voluntary) ಮತ್ತು ಇನ್ನೊಂದು ಅನೈಚ್ಛಿಕ (involuntary). ಆಲೋಚನೆಗಳು ಅನೈಚ್ಛಿಕ ಪ್ರತಿಫಲನಗಳು. ಸಾಮಾನ್ಯವಾಗಿ, ಅವು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸುತ್ತವೆ ಮತ್ತು ನೀವು ಅವುಗಳ ಪ್ರಕಾರ ನಡೆದುಕೊಳ್ಳುತ್ತೀರಿ. ನಿಮ್ಮ ಅರಿವಿಗೆ ತಿಳಿಯದೆ ಇದು ನಡೆಯುತ್ತಿದೆ. ನೀವು ಧ್ಯಾನ ಮಾಡಲು ಪ್ರಾರಂಭಿಸಿದಾಗ, ನಿಮ್ಮ ಅರಿವು ಹೆಚ್ಚಾಗುತ್ತದೆ. ಪರಿಣಾಮವಾಗಿ, ನೀವು ಅನೈಚ್ಛಿಕ ಚಟುವಟಿಕೆಗಳಿಂದ ಮುಕ್ತರಾಗುತ್ತೀರಿ.
ನಿಮ್ಮ ಆಲೋಚನೆಗಳನ್ನು ಗಮನಿಸುವ ಸಾಮರ್ಥ್ಯ ನಿಮಗೆ ಇದೆ. ನೀವು ಏನನ್ನಾದರೂ ಗಮನಿಸಿದಾಗ, ನೀವು ಅದರಿಂದ ಬೇರ್ಪಡುತ್ತೀರಿ. ಒಂದು ನಿರ್ದಿಷ್ಟ ಮಧ್ಯಂತರ ಸ್ಥಳ ಆಗ ಸಂಭವಿಸುತ್ತದೆ. ಯಾವುದಾದರೂ ಒಂದರಿಂದ ದೂರ ನಿಲ್ಲದೆ ನೀವು ಅದನ್ನು ಗಮನಿಸಲಾಗುವುದಿಲ್ಲ. ಆದ್ದರಿಂದ ನೀವು ನಿಮ್ಮ ಆಲೋಚನೆಗಳ ಮೇಲೆ ಕೇಂದ್ರೀಕರಿಸಿದಾಗ, ನೀವು ಆಲೋಚನೆಗಳಿಂದ ಬೇರ್ಪಡುತ್ತೀರಿ. ನೀವು ಆಲೋಚನೆಗಳಿಂದ ಮುಕ್ತರಾದಾಗ, ನೀವು ಆಲೋಚನೆಗಳನ್ನು ವಿಶ್ಲೇಷಿಸಬಹುದು ಮತ್ತು ಉತ್ತಮವಾದುವುಗಳನ್ನು ಆಯ್ಕೆ ಮಾಡಬಹುದು. ದೀರ್ಘಾವಧಿಯಲ್ಲಿ, ನಿಮ್ಮ ವೀಕ್ಷಣೆ ಸ್ಥಿರವಾಗಿರುತ್ತದೆ. ಆಗ, ಆಲೋಚನೆಗಳು ಕಡಿಮೆಯಾಗುತ್ತವೆ ಅಥವಾ ನಿಂತುಹೋಗುತ್ತವೆ. ಅನೈಚ್ಛಿಕ ಚಟುವಟಿಕೆ ನಿಮ್ಮ ನಿಯಂತ್ರಣದಲ್ಲಿರುತ್ತವೆ.
ಶುಭೋದಯ ... ನಿಮ್ಮ ಆಲೋಚನೆಗಳನ್ನು ಗಮನಿಸಿ..💐
ವೆಂಕಟೇಶ್ - ಬೆಂಗಳೂರು
(9342209728)
ಯಶಸ್ವಿ ಭವ
Comments