11.6.2015
ಪ್ರಶ್ನೆ: ಸರ್, ಆತ್ಮ ಸಂಗಾತಿ ಎಂದರೇನು? ಆತ್ಮ ಸಂಗಾತಿಯನ್ನು ಹುಡುಕುವ ಬಗೆ ಹೇಗೆ?
ಉತ್ತರ: ಆತ್ಮ ಸಂಗಾತಿ ಎಂದರೆ "ಏಕತೆಯ ಗುಣ". ಎರಡರ ನಡುವೆ ಯಾವುದೇ ವಿಭಜನೆ ಇರುವುದಿಲ್ಲ. ಇದು ಬೇರ್ಪಡಿಸಲಾಗದ ಐಕ್ಯತೆ. ಇದು ಸ೦ಪೂರ್ಣ ಸಾಮರಸ್ಯ. ಎರಡು ದೇಹಗಳು ಮತ್ತು ಒಂದು ಆತ್ಮ. ಇದು ಪ್ರೀತಿಯ ಅತ್ಯುನ್ನತ ಸ್ಥಿತಿ.
ನಿಮ್ಮ ದೇಹ, ಮನಸ್ಸು, ಆತ್ಮ ಮತ್ತು ಅರಿವು ಇನ್ನೊಬ್ಬ ವ್ಯಕ್ತಿಯ ದೇಹ, ಮನಸ್ಸು, ಆತ್ಮ ಮತ್ತು ಅರಿವಿನೊಂದಿಗೆ ಹೊಂದಿಕೆಯಾಗಿದ್ದರೆ, ಆ ವ್ಯಕ್ತಿಯು ನಿಮ್ಮ ಆತ್ಮ ಸಂಗಾತಿ ಎಂದರ್ಥ. ಸಾಮರಸ್ಯ ಎಂದರೆ ಯಾವುದೇ ವ್ಯತ್ಯಾಸ ಮತ್ತು ಸಂಘರ್ಷವಿಲ್ಲ.
ನಿಮ್ಮ ಆತ್ಮ ಸಂಗಾತಿಯನ್ನು ಹುಡುಕಲು ನೀವು ಬಯಸಿದರೆ, ಮೊದಲು ನೀವು ನಿಮ್ಮ ಆತ್ಮವನ್ನು ಕಂಡುಕೊಳ್ಳಬೇಕು. ಆತ್ಮ, ಅರಿವು ಏನೆಂಬುದನ್ನು ಅರಿತುಕೊಳ್ಳದೆ ನಿಮ್ಮ ಆತ್ಮ ಸಂಗಾತಿಯನ್ನು ನೀವು ಹೇಗೆ ಕಂಡುಕೊಳ್ಳುತ್ತೀರಿ? ಇದು ಅಸಂಭವವಾಗಿದೆ.
ನಿಮ್ಮ ಅರಿವು ದೈಹಿಕ ಮಟ್ಟದಲ್ಲಿದ್ದರೆ, ನೀವು ದೈಹಿಕ ಸಂಗಾತಿಯನ್ನು ಪಡೆಯುತ್ತೀರಿ. ನಿಮ್ಮ ಅರಿವು ಮಾನಸಿಕ ಮಟ್ಟದಲ್ಲಿದ್ದರೆ, ನೀವು ಮಾನಸಿಕ ಸಂಗಾತಿಯನ್ನು ಪಡೆಯುತ್ತೀರಿ. ನಿಮ್ಮ ಅರಿವು ಆತ್ಮ ಮಟ್ಟದಲ್ಲಿದ್ದರೆ, ನೀವು ಆತ್ಮ ಸಂಗಾತಿಯನ್ನು ಪಡೆಯುತ್ತೀರಿ.
ನಿಮ್ಮ ಅರಿವಿನ ಪ್ರಕಾರ, ನೀವು ನಿಮ್ಮ ಸಂಗಾತಿಯನ್ನು ಪಡೆಯುತ್ತೀರಿ. ನಿಮ್ಮ ಅರಿವನ್ನು ಹೆಚ್ಚಿಸುವ ಮೂಲಕ ನೀವು ಆತ್ಮ ಸಂಗಾತಿಯನ್ನು ಪಡೆಯಬಹುದು. ಇಬ್ಬರೂ ಒಬ್ಬರಲ್ಲೊಬರು ಪರಸ್ಪರ ಕರಗಿಹೋಗಬೇಕು. ಪ್ರೇಮಿಗಳು ಕರಗಿಹೋಗಿ, ಪ್ರೀತಿ ಮಾತ್ರ ಉಳಿಯಬೇಕು.
ಶುಭೋದಯ... ಆತ್ಮ ಸಂಗಾತಿಯಾಗಿ...💐
ವೆಂಕಟೇಶ್ - ಬೆಂಗಳೂರು
(9342209728)
ಯಶಸ್ವಿ ಭವ
Comentários